Belagavi

ಉಚಿತ ರಂಗ ತರಬೇತಿ ಶಿಬಿರ


ಬೆಳಗಾವಿ ೧೩- ನಗರದ ಕಲಾಗಂಗಾಧರ ಸಾಂಸ್ಕೃತಿಕ ವೇದಿಕೆ(ರಿ) ಇವರು ಬೆಳಗಾವಿಯಲ್ಲಿ ಉಚಿತ ರಂಗ ತರಬೇತಿ ಶಿಬಿರವನ್ನು ಏರ್ಪಡಿಸಿದ್ದಾರೆ. ನಟನೆ, ರಂಗಸAಗೀತ, ನೃತ್ಯ ಹಾಗೂ ರಂಗಸಾಹಿತ್ಯದ ಬಗ್ಗೆ ರಂಗತಜ್ಞರು ಈ ತರಬೇತಿಯಲ್ಲಿ ತಿಳಿಸಿಕೊಡಲಿದ್ದಾರೆ.
೧೮ ರಿಂದ ೪೦ ವಯೋಮಿತಿಯೊಳಗಿನವರು ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಇದೇ ದಿನಾಂಕ ೧೬ ಶನಿವಾರದಂದು ಬೆಳಿಗ್ಗೆ ೧೦ ರಿಂದ ಮದ್ಯಾಹ್ನ ೧.೩೦ ರ ವರೆಗೆ ಈ ಕುರಿತಂತೆ ಸಂದರ್ಶನ ನಡೆಯಲಿದೆ. ರಂಗಭೂಮಿ ಆಸಕ್ತಿಯುಳ್ಳವರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವೇದಿಕೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಠದ ತಿಳಿಸಿದ್ದಾರೆ.


Leave a Reply