Belagavi

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕುರಿತು ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದೆ: ಸಚಿವ ಡಾ. ಅಶ್ವತ್ಥನಾರಾಯಣ್


ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿಯ ಯಾವುದೇ ರೀತಿಯ ಸವಲತ್ತುಗಳನ್ನು ಹಿತ್ತುಕೊಳ್ಳುವುದಿಲ್ಲ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕುರಿತು ಸುಳ್ಳು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಸಚಿವ ಡಾ. ಅಶ್ವತ್ಥನಾರಾಯಣ್ ಹೇಳಿದ್ದಾರೆ.

ಬೆಳಗಾವಿ ನಗರದ ಕೆಎಲ್‍ಇ ಆವರಣದಲ್ಲಿನ ಜೀರಗೆ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ಮೇಲೆ ಶಿಕ್ಷಣ ಇಲಾಖೆಯ ಹಲವಾರು ಸೌಲಭ್ಯಗಳನ್ನು ತೆಗೆದುಹಾಕಲಾಗುತ್ತದೆ ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ದಲಿತರ ಹಾಗೂ ಶೋಶಿತರಿಗೆ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸಲಾಗಿತ್ತದೆ ಎಂದು ತಪ್ಪು ಸಂದೇಶವನ್ನು ಹಬ್ಬಿಸಲಾಗುತ್ತಿದೆ. ಆದರೆ ಆ ರೀತಿಯ ವಿಚಾರಗಳು ಈ ಯೋಜನೆಯಲ್ಲಿ ಇಲ್ಲ. ಬದಲಾಗಿ ಮೊದಲು 6ನೇ ವಯಸ್ಸಿನಿಂದ ಪ್ರಾರಂಭವಾಗಿತ್ತಿದ್ದ ಔಪಚಾರಿಕ ಶಿಕ್ಷಣವನ್ನು ಮೂರನೇ ವಯಸ್ಸಿನಿಂದಲೇ ಪ್ರಾರಂಭಿಸಲಾಗುತ್ತಿದೆ. ಇದರಿಂದ ಶಿಕ್ಷಣದ ಉನ್ನತೀಕರಣ ಸಾಧ್ಯವಾಗುತ್ತಿದೆ ಎಂದರು.

ಇನ್ನು ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿ ಕುರಿತಂತೆ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯಾಗದ ಹೊರತು ಸಮಾಜದಲ್ಲಿ ಗುಣಮಟ್ಟದ ಜೀವನ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಉತ್ತಮ ರೀತಿಯ ಸೌಲಭ್ಯ ಹಾಗೂ ಸಂಪನಗ್ಮೂಲಗಳನ್ನು ಕೊಟ್ಟು, ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ. ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಎಲ್ಲರಿಗೂ ಶಕ್ತಿ ತುಂಬುವ ಕಲೆಸವನ್ನು ಮಾಡುತ್ತಿದ್ದೇವೆ. ಹಾಗಾಗಿ ಸರಕಾರದಲ್ಲಿ ನಂಬಿಕೆ ಇಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ವಿಧಾನಪರಿಷತ್ ಸದಸ್ಯ ಅರುಣ್ ಶಹಪುರೆ, ಹನುಮಂತ ನಿರಾಣಿ, ಪ್ರೋ. ರಾಮಚಂದ್ರೇಗೌಡ್, ಆರ್‍ಎಲ್‍ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಜ್ಯೋತಿ ಕವಳೇಕರ್, ಬಸವರಾಜ ವೈದ್ಯಶಾಲಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು


Leave a Reply