BallarykaranatakaNationalState

50 ಜನಕ್ಕೆ ಗಾಯ, ಇಬ್ಬರು ಗಂಬೀರ : ದೇವರಗಟ್ಟು ಬನ್ನಿ ಉತ್ಸವ ಗಲಾಟೆ ?


ಬಳ್ಳಾರಿ ಜಿಲ್ಲೆಯ ಗಡಿ  ಆಂದ್ರಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲೂಕಿನ ದೆವರಗಟ್ಟು  ಗ್ರಾಮದಲ್ಲ್ಪುಪುರಾತನ ಕಾಲದಿಂದಲೂ ದಸರಾ ಹಬ್ಬದ ಸಮಯದಲ್ಲಿ ಕಾರಣಿಕ ಉತ್ಸವ ನಡೆಯುತ್ತದೆ.

ಉತ್ಸವದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ. ಪುರಾತನ ಕಾಲದಿಂದ ಮಾಳಮಲ್ಲೆಶ್ವರ ಉತ್ಸವದ ದೇವರ ವಿಗ್ರಹಗಳನ್ನು ಕೆಲ ಗ್ರಾಮಗಳ ಜನರು ತಮ್ಮ ಗ್ರಾಮಗಳಿಗೆ ತೆಗೆದುಕೊಂಡು ಹೋಗಬೇಕು ಎಂದು ಇನ್ನೂ  ಬೇರೆ ಬೇರೆ  ಗ್ರಾಮಗಳ ಜನರು ಅಡ್ಡಿಪಡಿಸುವ ನಿಟ್ಟಿನಲ್ಲಿ ಸಮರ ನೆಡೆಯುತ್ತದೆ.ಇದೊಂದು ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದೆ

ಹೀಗೆ ತಮ್ಮ ತಮ್ಮ ಗ್ರಾಮಗಳಿಗೆ ದೇವರುಗಳನ್ನು ಕರೆದುಕೊಂಡು ಹೋಗಲೇ ಬೇಕು ಎನ್ನುವ  ವ    ಆ ಸಮಯದಲ್ಲಿ  ಸಂಘರ್ಷ ನಡೆಯುತ್ತದೆ ಬಡಿಗೆಗಳಿಂದ ಹೊಡೆದಾಟವೂ ನಡೆಯುತ್ತದೆ ಆಗ ಕೆಲ ಜನರು ಗಾಯಗೊಂಡರೇ  ಕೆಲವು ಜನರ ಸಾವುಗಳು ಆಗಿರುವ ಉದಾಹರಣೆಗಳಿವೆ
ಪೋಲಿಸ್ ಇಲಾಖೆಯ ಎಷ್ಟೇ ನಿಯಂತ್ರಣ ಮಾಡಿದರೂ ,ಎಷ್ಟೇ  ಪೂರ್ವಭಾವಿ ಸಸ್ಯಗಳನ್ನು ತೆಗೆದುಕೊಂಡರು ತಲೆತಲಾಂತರಗಳಿಂದ ಬಂದಿರುವ ಈ ವಿಚಿತ್ರ   ಪದ್ಧತಿ ಮತ್ತು  ಸಮರ ನಿಲ್ಲದು.
ಹಳೆಯ ಕಾಲದ ದಿಂದ ಉತ್ಸವ ಕ್ಕೆ ಜನರು ಕಟ್ಟೆಗೆ (ಬಡಿಗೆ) ಬೆಂಕಿಯ ದೀವಿಟಿಗಳು(ದೀಪಗಳು) ಹಿಡಿದು ಕೊಂಡು ಬರುತ್ತಾರೆ. ದೆವರ ವಿಗ್ರಹಗಳನ್ನು, ಸುತ್ತ ಮುತ್ತಲಿನ, ಹತ್ತಾರು ಗ್ರಾಮಗಳ ಜನರು ಉತ್ಸವಕ್ಕೆ ತೆಗೆದುಕೊಂಡು ಹೊಗುವ ಸಮಯದಲ್ಲಿ ಮಧ್ಯರಾತ್ರಿ ಈ ಘರ್ಷಣೆ ನಡೆದೇ ನಡೆಯುತ್ತಿದೆ.

ಇಲ್ಲಿನ ಕಾರಣಿಕ ಉತ್ಸವ ದಲ್ಲಿ ಅರ್ಚಕರು ಹೇಳುವ ಹೇಳಿಕೆ ತುಂಬಾ ಮಹತ್ವದ ಪಡೆದುಕೊಳ್ಳುತ್ತದೆ.

ಈ ಬಾರಿ ನಡೆದ ಉತ್ಸವ ದಲ್ಲಿ  50 ಜನಕ್ಕೆ  ಗಾಯಗಳಾಗಿದ್ದು ಇಬ್ಬರ ಪರಿಸ್ಥಿತಿ ಗಂಭೀರ ವಾಗಿದೆ ಏಂದು ತಿಳಿದು ಬಂದಿದೆ. ಇನ್ನೂ ವಿಚಿತ್ರವೆಂದರೆ ಈ ಘಟನೆಗಳಿಗೆ ಸಂಬಂಧಿಸಿದಂತೆ ಯಾರು ಯಾರ ವಿರುದ್ಧವೂ ಪ್ರಕರಣದ ಕಳಿಸುವುದೇ ಇಲ್ಲವಂತೆ !?? ಸುತ್ತಮುತ್ತಲಿನ ಜನರು ಉತ್ಸವ ಸಮಯದಲ್ಲಿ ಜಗಳ ಮಾಡಿಕೊಂಡರು, ಯಾವುದೇ ಪ್ರಕರಣ ದಾಖಲು ಮಾಡುವುದು ಇಲ್ಲ.  ಉತ್ಸವ ಮುಗಿದ ನಂತರ  ಮೊದಲಿನಂತೆ  ಎಲ್ಲರೂ ಅಣ್ಣ ತಮ್ಮದಿರಂತೆ ಒಂದಾಗುಗುತ್ತಾರ೦ತೆ .

(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)


Leave a Reply