Koppal

ಬಹಳ ಅರ್ಥ ಪೂರ್ಣವಾಗಿ ನಡೆದ ಗರ್ಭಿಣಿಯರಿಗೆ ಸೀಮಂತ ಕಾರ್ಯ ಕಾರ್ಯಕ್ರಮ


ಕುಷ್ಟಗಿ:- ಕುಷ್ಟಗಿ ಪಟ್ಟಣದ ಶ್ರೀ ಕರಿಬಸವೇಶ್ವರ ಸ್ವಾಮಿ ಮದ್ದಾನೇಶ್ವರ ಹಿರೇಮಠದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,‌ ಶಿಶು ಅಭಿವೃದ್ಧಿ ಯೋಜನೆ ಕುಷ್ಟಗಿ ಇವರ ಸಂಯುಕ್ತ ಆಶ್ರಯದಲ್ಲಿ
ಮಾತೃವಂದನಾ, ಮಾತೃಪೂರ್ಣ, ಮಾತೃಶ್ರೀ ಯೋಜನೆ ಹಾಗೂಶಾಲಾ-ಪೂರ್ವ ಶಿಕ್ಷಣ (ಟಾಟಾ ಟ್ರಸ್ಟ್ ಕಲಕಾ-ವಿಭಾಗ) ಕಾರ್ಯಕ್ರಮಗಳ ಜಾಗೃತಿ ಶಿಬಿರ ಹಾಗೂ ಅಂಗನವಾಡಿ ಕೇಂದ್ರ ಸಂಖ್ಯೆ ೮, ಕೇಂದ್ರ ಸಂಖ್ಯೆ ೯, ಕೇಂದ್ರ ಸಂಖ್ಯೆ ೨೫, ಮತ್ತು‌ ೨೬ನೇ ಅಂಗನವಾಡಿ ಕೇಂದ್ರ ಸಂಖ್ಯೆಯಲ್ಲಿ ಆಯೋಜನೆ ಮಾಡಲಾಗಿದ್ದ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಅತ್ಯಂತ ಬಹಳ ಅರ್ಥ ಪೂರ್ಣವಾಗಿ ನಡೆಯಿತು.

ಅಂಗನವಾಡಿಯ ಬಾಲ ವಿಕಾಸ ಸಮಿತಿ ಅಧ್ಯಕ್ಷರು ಹಾಗೂ ಅಂಗನವಾಡಿ ಕಾರ್ಯಕರ್ತೆರು ಮತ್ತು ಗರ್ಭಿಣಿಯರು ಸೇರಿ ಶಶಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದೇ ವೇಳೆ ಕಾರ್ಯಕ್ರಮ ಕುರಿತು ಮಾತನಾಡಿದ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಅಶ್ವಿನಿ ಪವಾಡೆಪ್ಪ ಚೌಡ್ಕಿ ಮಾತನಾಡಿ ಒಬ್ಬ ಗರ್ಭಿಣಿಗೆ ಒಂದು ಕುಟುಂಬದವರು ಮಾತ್ರ ಸೀಮಂತ ಕಾರ್ಯವನ್ನು ಮಾಡುತ್ತಾರೆ ಆದರೆ ಇಲ್ಲಿ ಹತ್ತು ಗರ್ಭಿಣಿಯರನ್ನು ಸೇರಿಸಿ ಸರ್ವವರು ಸೇರಿ ಅರಿಸಿನ ಕುಂಕುಮವನ್ನು ನೀಡಿ ಅಂಗನವಾಡಿ ಮತ್ತು ಸರಕಾರದ ಸಹಯೋಗದಲ್ಲಿ ಸೀಮಂತ ಕಾರ್ಯವನ್ನು ಮಾಡುವಂತದ್ದು ಬಹಳ ಶ್ಲಾಘನೀಯವಾಗಿದೆ.

ಆದರೆ ಸರಕಾರ ಗರ್ಭಿಣಿಯರಿಗೆ ಬಾಣತಿಯರಿಗೆ ಹುಟ್ಟುವಂತ ಮಗು ಹುಟ್ಟಿದ ಮಗು ಆರೋಗ್ಯವಂತ ಮಗು ಹುಟ್ಟಬೇಕು ಆರೋಗ್ಯವಂತ ಮಗು‌ ಬೆಳೆಯಬೇಕು ಎಂದು ಸರಕಾರ ಅಂಗನವಾಡಿ ಕೇಂದ್ರದ ಮೂಲಕ‌ ಗರ್ಭಿಣಿಯರಿಗೆ ಬಾಣತಿಯರಿಗೆ ಅಪೌಷ್ಟಿಕತೆ ಹೋಗಲಾಡಿಸಲು ಪೌಷ್ಟಿಕತೆಯ ಆಹಾರವನ್ನು ಪೂರೈಕೆ ಮಾಡುತ್ತಿದೆ. ನಾವುಗಳು ಆರೋಗ್ಯದ ಹಿತದೃಷ್ಟಿಯಿಂದ ಉತ್ತಮವಾದ ಹಸಿರು ತರಕಾರಿ ಹಾಲು ಹಣ್ಣು ಪೌಷ್ಟಿಕಾಂಶ ಆಹಾರವನ್ನು ಸೇವನೆ ಮಾಡಿ ವೈದ್ಯರ ಸಲಹೆ ಪಡೆದು ರಕ್ತಹೀನತೆ
ಹೋಗಲಾಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶಿವಲಿಂಗಮ್ಮ ಕಾರ್ಯಕ್ರಮವನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಬಹಳ ವಿಸ್ತಾರವಾಗಿ ಗರ್ಭಿಣಿಯರು ತಮ್ಮ ಆರೋಗ್ಯವನ್ನು ನಾವುಗಳು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ತಾಯಿ‌ ಮಗು ಆರೋಗ್ಯವಾಗಿರಲು ಪೌಷ್ಟಿಕ ಆಹಾರವನ್ನು ಸೇವಿಸುವದರ ಬಗ್ಗೆ ಸಹವಿಸ್ತಾರವಾಗಿ ಹೇಳಿದರು.

ಇನ್ನೋರ್ವ ಅಂಗನವಾಡಿ ಕಾರ್ಯಕರ್ತೆಯರಾದ ಸುನೀತಾ, ಗಂಗಮ್ಮ ಚೂರಿ, ಶರಣಮ್ಮ‌ ಸೋಮನಕಟ್ಟಿ ಗರ್ಭಿಣಿಯರಿಗೆ ಹೂ, ಹಸಿರು ಬಳೆ, ಬಾಳೆ ಹಣ್ಣು, ಉತ್ತತ್ತಿ, ಅರಿಶಿನ ಕೊಂಬು ಹಸಿರು ಕಣ ಕೊಟ್ಟು ಉಡಿತುಂಬಿ ಶುಭ ಆರೈಸಿದರು.
ಈ ಸಂದರ್ಭದಲ್ಲಿ ಮಂಜುಳಾ ಮಣಸಗೇರಿ, ಬಾಲ ವಿಕಾಸ ಸಮಿತಿ ಸದಸ್ಯ ಶಾಂತಮ್ಮ ಪಾಟೀಲ್, ಸಂಗೀತ ಅನ್ನದಾನೇಶ್ವರ, ನೇತ್ರಾ ಹತ್ತಿಕಟಗಿ, ಉಮಾ ಹಿರೇಮಠ, ರೇಖಾ ವೀರುಪಾಕ್ಷಯ್ಯ, ಸುನೀತಾ ಪಟ್ಟಣಶೆಟ್ಟರ್, ಹನಮಂತ ಡಂಬರ್ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

ಶೇಖರ್ ಎಸ್ ಕನಸಾವಿ
ಕುಷ್ಟಗಿ


Leave a Reply