Belagavi

ಗಣ್ಯರಿಂದ ಕಲ್ಯಾಣರಾವ್ ಮುಚಳಂಬಿ ಅವರಿಗೆ ಶ್ರದ್ಧಾಂಜಲಿ


ಬೆಳಗಾವಿ: ಇತ್ತಿಚೆಗೆ ಅಗಲಿದ ಹಿರಿಯ ರೈತ ಹೋರಾಟಗಾರರು, ಪತ್ರಕರ್ತರು ಆಗಿದ್ದ ಕಲ್ಯಾಣರಾವ್ ಮುಚಳಂಬಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸುವ ಮೂಲಕ ಹಲವು ಗಣ್ಯರು ಬೆಳಗಾವಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ರವಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ವಿವಿಧ ರೈತ ಸಂಘಟನೆಗಳು ಸೇರಿದಂತೆ ಇನ್ನಿತರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿ ಇನ್ನಿತರ ಹಲವು ಗಣ್ಯರು ದಿ.ಕಲ್ಯಾಣರಾವ್ ಮುಚಳಂಬಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಶಿಕಾಂತ ನಾಯಿಕ್, ಮುಖಂಡರಾದ ಮಲ್ಲಿಕಾರ್ಜುನ ವಾಲಿ, ಅಶೋಕ ಪೂಜಾರಿ, ನ್ಯಾಯವಾದಿ ಎನ್.ಆರ್.ಲಾತೂರ್, ಸಿದಗೌಡ ಮೊದಗಿ, ಚೂನಪ್ಪ ಪೂಜಾರಿ, ಸರೋಜಿನಿ, ಶಿವನಗೌಡ ಪಾಟೀಲ್, ಅಪ್ಪಾಸಾಹೇಬ ದೇಸಾಯಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.


Leave a Reply