karanatakaKoppal

ಆಜೀವ ಸದಸ್ಯರನ್ನು ಬೇಟಿ ಮಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶರಣಗೌಡ ಪಾಟೀಲ್


ಕುಷ್ಟಗಿ. ಅ.17. ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಶರಣಗೌಡ ಪಾಟೀಲ್ ಇವರು ನವೆಂಬರ್ 21ರಂದು ಜರುಗುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ಕೇಂದ್ರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಆಜೀವ ಸದಸ್ಯತ್ವ ದಾರರನ್ನು ಕಂಡು ಮನೆಮನೆಗೆ ತೆರಳಿ ಪ್ರಚಾರ ಕೈಗೊಂಡರು.

ಶರಣಗೌಡ ಪಾಟೀಲ್ ತಾಲೂಕಿನ ಹನುಮಸಾಗರದಲ್ಲಿ ಮಾತನಾಡಿ ಜಿಲ್ಲಾ ಕೇಂದ್ರ ಸ್ಥಾನಕ್ಕೆ ತಮಗೆ ಕೇಂದ್ರ ಸ್ಥಾನಕ್ಕೆ ಡಾ. ಶೇಖರಗೌಡ ಮಾಲಿಪಾಟೀಲ್ ಪರ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಜಶೇಖರ ಅಂಗಡಿ ಮಾತನಾಡಿ ನನ್ನ ಅವಧಿಯಲ್ಲಿ ಹನುಮಸಾಗರದಲ್ಲಿ ಸೇರಿದಂತೆ ತಾವರಗೇರಾ,ಗುಮಗೇರಾ, ಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶ್ರಮ ಪಟ್ಟಿದ್ದು ಈಗಾಗಲೇ ಅವುಗಳು ಉದ್ಘಾಟನೆ ಕೂಡ ಆಗಿ ಪೂರ್ಣಗೊಂಡಿವೆ. ಹಲವಾರು ಎಲೆಮರೆಯ ಸಾಹಿತಿ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆಯನ್ನು ಹೊರತರಲು ಸಾಹಿತ್ಯ ಸಮ್ಮೇಳನಗಳ ಆಯೋಜನೆ ಮಾಡಿ ಸಾಹಿತಿಗಳ ಪುಸ್ತಕಗಳನ್ನು ಕನ್ನಡ ಸಾಹಿತ್ಯಪರಿಷತ್ತಿನ ನೆರವು ನೀಡಿ ಪ್ರಕಟಿಸಲಾಗಿದೆ.ಪ್ರತಿ ತಾಲೂಕು ಹೋಬಳಿ ಮಟ್ಟದಲ್ಲಿ ಸಾಹಿತ್ಯದ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ ಈಗ ನಮ್ಮ ಬಣದ ಜಿಲ್ಲಾ ಅಭ್ಯರ್ಥಿ ಶರಣಗೌಡ ಪಾಟೀಲ್ ಕೇಂದ್ರ ಸಮಿತಿಗೆ ಶೇಖರಗೌಡ ಮಾಲಿಪಾಟೀಲ್ ಅವರಿಗೆ ಬೆಂಬಲಿಸಿ ಮತ ನೀಡುವ ಮೂಲಕ ಕನ್ನಡ ನಾಡು ನುಡಿ ಸೇವೆಗೆ ಅನುವು ಮಾಡಿಕೊಡಬೇಕು ಎಂದು ಆಜೀವ ಸದಸ್ಯರಲ್ಲಿ ಮನವಿ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಜಿಲ್ಲಾ ನಿಕಟಪೂರ್ವ ಗೌರವ ಕಾರ್ಯದರ್ಶಿ ರವೀಂದ್ರ ಬಾಕಳೆ ತಾಲೂಕ ನಿಕಟಪೂರ್ವ ಅಧ್ಯಕ್ಷ ಉಮೇಶ್ ಹಿರೇಮಠ ಮಾಜಿ ಅಧ್ಯಕ್ಷ ಶ್ರೀನಿವಾಸ ಜಹಗೀರ್ ದಾರ, ಹಿರಿಯ ಆಜೀವ ಸದಸ್ಯರಾದ ಅಬ್ದುಲ್ ಕರಿಂ ವಂಟೇಳಿ, ರಾಮಚಂದ್ರ ಬಡಿಗೇರ್,ಅಶೋಕ ಪಾಟೀಲ್,ವಿರೇಶ ವಿಶ್ವಕರ್ಮ ,ಲೆಂಕಪ್ಪ ವಾಲಿಕಾರ, ಮಂಜುನಾಥ ಗುಳೇದಗುಡ್ಡ, ಮಲ್ಲಯ್ಯ ಕೋಮಾರಿ, ಸಂಗಯ್ಯ ವಸ್ತ್ರದ್, ವಿಶ್ವನಾಥ್ ಕನ್ನೂರ, ಸೇರಿದಂತೆ ಚುನಾವಣಾ ಪ್ರಚಾರ ಕೈಗೊಂಡರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply