Belagavi

ಹತ್ಯೆಯಾದ ಅರ್ಬಾಜ್ ಕುಟುಂಬಕ್ಕೆ ಪರಿಹಾರ ನೀಡಲು ಅಖಿಲ ಭಾರತ ಛಲವಾದಿ ಮಹಾಸಭಾ ಆಗ್ರಹ


ಬೆಳಗಾವಿ: ಖಾನಾಪುರ ತಾಲೂಕಿನ ಅರ್ಬಾಜ್ ಮುಲ್ಲಾ ಎಂಬ ಯುವಕನನ್ನು ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವತಿಯ ಕುಟುಂಬಸ್ಥರು ಶ್ರೀರಾಮ್ ಸೇನಾ ಹಿಂದೂಸ್ತಾನ್ ತಾಲೂಕಾಧ್ಯಕ್ಷನಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದು ಒಂದು ಅಮಾನುಷ್ಯ ಕೃತ್ಯವಾಗಿದ್ದು . ಹತ್ಯೆಯಾದ ಯುವಕನ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕೆಂದು ಅಖಿಲ ಭಾರತ ಛಲವಾದಿ ಮಹಾಸಭಾದ ಮಹಿಳಾ ಅಧ್ಯಕ್ಷೆ ಗೌರಮ್ಮ ಆಗ್ರಹಿಸಿದರು.

ಸೋಮವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ. ಅರ್ಬಾಜ್ ಮುಲ್ಲಾ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿ ರೈಲ್ವೆ ಹಳಿಯ ಬಳಿಗೆ ಎಸೆಯಲಾಗಿದ್ದು ಒಂದು ಆಘಾತಕಾರಿ ಸಂಗತಿಯಾಗಿದೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಪ್ರೀತಿಸುವ ಹಾಗೂ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದ ಹಕ್ಕು ನೀಡಿದೆ. ಸರ್ವೋಚ್ಚ ನ್ಯಾಯಾಲಯವು ಇಂಥ ಕೊಲೆ ಪ್ರಕರಣಗಳು ಖಂಡಿಸಿದೆ‌. ಆದರೂ ಸಹ ಇಂಥ ಘಟನೆಗಳು ದೇಶಾದ್ಯಂತ ಮರುಕಳಿಸುತ್ತಿರುವುದು ದುರ್ದೈವದ ಸಂಗತಿ ಎಂದರು‌.

ಯುವಕ ಅರ್ಬಾಜ್ ಮುಲ್ಲಾ ಕೊಲೆನ್ನು ಶ್ರೀರಾಮ್ ಸೇನೆ ಹಿಂದೂಸ್ತಾನ್ ಸೇರಿದಂತೆ ಮೂಲಭೂತವಾದಿ, ಧರ್ಮಾಂಧ ಗುಂಪುಗಳ ಸದಸ್ಯರಿಗೆ ಮನುಷ್ಯರ ಪ್ರಾಣ ಹಾಗೂ ಸಂವಿಧಾನದ ತತ್ವಗಳ ಮೇಲೆ ಇರುವ ಅಗೌರವವನ್ನು ಸೂಚಿಸುತ್ತದೆ. ಯುವಕನ ಹತ್ಯೆಗೆ ಕಾರಣರಾದವರಿಗೆ ಶಿಕ್ಷೆ ವಿಧಿಸಬೇಕು ಮತ್ತು ಸರಕಾರದಿಂದ ಪರಿಹಾರ ಘೋಷಣೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಶಾರದಾ ಗೋಪಾಲ, ಶಿಲ್ಪಾ ಕೋಲಕಾರ, ರಾಜೇಶ್ವರಿ ಜೋಳಿ, ವಿಮಾ ಚನ್ನಿ, ಶಿವಾಜಿ ಕಾಗಣಿಕರ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.


Leave a Reply