Belagavi

ಬೆಳಗಾವಿಗೆ ಆಗಮಿಸಿದ ಕಿತ್ತೂರು ಉತ್ಸವದ ವೀರ ಜ್ಯೋತಿಯನ್ನು ಬರಮಾಡಿಕೊಂಡ ಗಣ್ಯರು


ಬೆಳಗಾವಿ: ಖಾನಾಪುರ ತಾಲೂಕಿನಿಂದ ಕುಂದಾನಗರಿ ಬೆಳಗಾವಿಗೆ ಆಗಮಿಸಿದ ಕಿತ್ತೂರು ಉತ್ಸವದ ವೀರ ಜ್ಯೋತಿಯನ್ನು ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೇರಿದಂತೆ ಇತರ ಗಣ್ಯರು ಬರಮಾಡಿಕೊಂಡರು.

ಬೈಲಹೊಂಗಲದಿಂದ ಪ್ರಾರಂಭವಾದ ಕಿತ್ತೂರು ಉತ್ಸವದ ವೀರಜ್ಯೋತಿ ಖಾನಾಪುರ ಮಾರ್ಗವಾಗಿ ಇಂದು ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದಂತೆ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೇರಿದಂತೆ ಇತರ ಗಣ್ಯರು ಜ್ಯೋತಿ ಬರಮಾಡಿಕೊಂಡು, ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.

ಈ ವೇಳೆ ಶಾಸಕ ಅನಿಲ ಬೆನಕೆ ಮಾತನಾಡಿ, 23, 24 ರಂದು ನಡೆಯುವ ಕಿತ್ತೂರು ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಅಧಿಕಾರಿಗಳು ಬರುತ್ತಾರೆ. ಇನ್ನು ಆಜಾಧಿಕಾ ಉತ್ಸವ ನೆನಪು ಮಾಡಿಕೊಳ್ಳುಬೇಕಾದರೆ ಕಿತ್ತೂರ ಮಹಾರಾಣಿ ಚನ್ನಮ್ಮ. ಆದ್ದರಿಂದ ಇವತ್ತು ಅವರನ್ನು ನೆನಪು ಮಾಡಿಕೊಳ್ಳಬೇಕು ಮತ್ತು ಇತಿಹಾಸ ಓದಬೇಕು ಎಂದರು.

ಬಳಿಕ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಕಿತ್ತೆ ಉತ್ಸವ ಇದೊಂದು ಐತಿಹಾಸಿಕ ಉತ್ಸವ. ಏಕೆಂದರೆ 25ನೇ ವರ್ಷ ಉತ್ಸವ ಮಾಡ್ತಾ ಇದ್ದೇವೆ. ಇದೊಂದು ಬೆಳ್ಳಿ ಹಬ್ಬ ಎಂದು ಆಚರಣೆ ಮಾಡುತ್ತಿದ್ದೇವೆ. ಈ ಕಿತ್ತೂರು ಉತ್ಸವದ ವೀರ ಜ್ಯೋತಿ ಬೈಲಹೊಂಗಲ ಪ್ರಾರಂಭವಾಗಿ ಎಲ್ಲಾ ಬೆಳಗಾವಿ ತಾಲೂಕುಗಳಲ್ಲಿ ಸಂಚರಿಸಿ 23ಕ್ಕೆ ಚನ್ನಮ್ಮ ಕಿತ್ತೂರಗೆ ತಲುಪುದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದೆ ಮಂಗಲ ಅಂಗಡಿ, ಅಧಿಕಾರಿಗಳು ಹಾಗೂ ಕನ್ನಡಪರ ಹೋರಾಟಗಾರರು ಮತ್ತು ವಾದ್ಯಮೇಳದವರು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಇನ್ನ ಕಿತ್ತೂರು ಉತ್ಸವದ ವೀರ ಜ್ಯೋತಿಯು ಬೆಳಗಾವಿಯ ಕಾಕತಿ ಮಾರ್ಗವಾಗಿ 23ಕ್ಕೆ ಚನ್ನಮ್ಮ ಕಿತ್ತೂರಗೆ ತಲುಪುತ್ತದೆ.


Leave a Reply