Belagavi

ಮತ್ತೆ ಬ್ಯಾನರ್ ಪ್ರೊಟೆಸ್ಟ್: ಶಿಷ್ಟಾಚಾರ ಉಲ್ಲಂಘನೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್- ಧನಂಜಯ್ ಜಾಧವ್


ಬೆಳಗಾವಿ: ಮಹಾಬಲೇಶ್ವರ ಥೀಮ್ ಆಧಾರಿತ ಉದ್ಯಾನವನ ಕಾಮಗಾರಿಗೆ ಸ್ಮಾರ್ಟ್ ಸಿಟಿ ಯೋಜನೆಅಡಿ ಕಾಮಗಾರಿಯನ್ನು ರೂಪಿಸಲಾಗಿದ್ದು, ಇಲ್ಲಿ ಕೇವಲ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಉಳ್ಳ ಬ್ಯಾನರ್ ಹಾಕಲಾಗಿತ್ತು. ಇದನ್ನು ಆರೋಪಿಸಿ ಇಂದು ಬೆಳಗಾವಿಯ ಬಿಜೆಪಿ ಗ್ರಾಮೀಣ ಮಂಡಳದ ವತಿಯಿಂದ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ಭಾವಚಿತ್ರ ಉಳ್ಳ ಬ್ಯಾನರ್ ಹಾಕಿ ಪ್ರತಿಭಟನೆ ಮಾಡಿದರು.

ಹೌದು ಬೆಳಗಾವಿ ಗ್ರಾಮೀಣ ಭಾಗದ ಸಹ್ಯಾದ್ರಿ ನಗರದಲ್ಲಿ ಮಹಾಬಲೇಶ್ವರ ಥೀಮ್ ಆಧಾರಿತ ಉದ್ಯಾನವನ ಕಾಮಗಾರಿಗೆ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕಾಮಗಾರಿಯನ್ನು ರೂಪಿಸಲಾಗಿದೆ. ಸುಮಾರು 83ಲಕ್ಷ ಮೌಲ್ಯದ ಕಾಮಗಾರಿ ಚಾಲನೆ ನೀಡುವ ಸಂದರ್ಭದಲ್ಲಿ ಅಲ್ಲಿ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ನಾಯಕರ ಭಾವಚಿತ್ರಗಳನ್ನು ಹೊಂದಿರುವ ಬ್ಯಾನರ್ ಹಾಕದೇ ಕೇವಲ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಉಳ್ಳ ಬ್ಯಾನರ್ ಹಾಕಲಾಗಿದೆ. ಹಾಗಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಶಿಷ್ಠಾಚಾರದ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿದರು.

ಈ ವೇಳೆ ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಧನಂಜಯ್ ಜಾಧವ್ ಮಾದ್ಯಮರೊಂದಿಗೆ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಸಹ್ಯಾದ್ರಿ ನಗರದಲ್ಲಿ ಮಾಡಲಾಗುತ್ತಿರುವ ಮಹಾಬಲೇಶ್ವರ ಉದ್ಯಾನವನ ಕಾಮಗಾರಿಗಾಗಿ ಮಾಡಿಸಿದ ಬ್ಯಾನರ್‍ನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ನಾಯಕರ ಭಾವಚಿತ್ರ ಹಾಕದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ನಗರಸೇವಕಿ ವೀಣಾ ವಿಜಾಪುರೆ ಬೆಳಗಾವಿ ಗ್ರಾಮೀಣ ಶಾಸಕರು ಶಿಷ್ಟಾಚಾರದ ಪ್ರಕಾರ ಬ್ಯಾನರ್ ಹಾಕಿಲ್ಲ. ಹಾಗಾಗಿ ಬಿಜೆಪಿ ಗ್ರಾಮೀಣ ಹಾಗೂ ಉತ್ತರ ಕಾರ್ಯಕರ್ತರೆಲ್ಲ ಸೇರಿ ಅದನ್ನು ಸರಿಪಡಿಸಿ ಬ್ಯಾನರ್‍ನ್ನು ಹಾಕಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಅನೀಲ್ ಪಾಟೀಲ್, ಸುರೇಶ ಘೋರ್ಪಡೆ, ಪ್ರಸಾದ ಪೂಜಾರಿ ಗಣಪತಿ ದೇಸಾಯಿ ಮತ್ತು ಬಿಜೆಪಿ ಗ್ರಾಮೀಣ ಮಂಡಳದವರು ಸೇರಿದಂತೆ ಮೊದಲಾದವರು ಹಾಜರಿದ್ದರು.


Leave a Reply