Belagavi

ವಿದ್ಯರ‍್ಥಿಗಳು ಶಿಕ್ಷಣವಂತರಾಗಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು, ಶಾಸಕ ಕೌಜಲಗಿ


ಬೈಲಹೊಂಗಲ ೧೯ – ಇಂದಿನ ವಿದ್ಯರ‍್ಥಿಗಳು ವ್ಯಾಸಂಗದಲ್ಲಿ ಶ್ರದ್ಧಾ ಭಕ್ತಿಯಿಂದ ಅಧ್ಯಯನ ಮಾಡಿ ಶಿಕ್ಷಣವಂತರಾಗಿ ಜೀವನದಲ್ಲಿ ಸಾಧನೆ ಮಾಡಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ವಿದ್ಯರ‍್ಥಿಗಳಿಗೆ ಕರೆ ನೀಡಿದರು.

ಪಟ್ಟಣದ ಶ್ರೀ ಶಿವಬಸವ ಕಲ್ಯಾಣ ಮಂಟಪದಲ್ಲಿ ರವಿವಾರ ರ‍್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ತಾಲೂಕ ಘಟಕ ಆಶ್ರಯದಲ್ಲಿ ಜರುಗಿದ ತಾಲೂಕಿನ ಬಣಜಿಗ ಸಮಾಜದ ಪ್ರತಿಭಾವಂತ ವಿದ್ಯರ‍್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಸಮಾಜದ ಬಾಂಧವರು ಸಮಾಜದ ಕರ‍್ಯಕ್ರಮಗಳಲ್ಲಿ ಭಾಗವಹಿಸಿ ಸಮಾಜದ ಸಂಘಟನೆಗೆ ಮುಂದಾಗಬೇಕು ಎಂದು ನುಡಿದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ ವಿದ್ಯರ‍್ಥಿಗಳು ಕಲಿಕೆಯಲ್ಲಿ ಹೆಚ್ಚು ಗಮನಹರಿಸಿ ಕಲಿಕೆಯಲ್ಲಿ ಆಸಕ್ತಿ ತೋರಿ ಅಧ್ಯಯನ ಮಾಡಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು. ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ ಮಾತನಾಡಿ ನಾಡು ನುಡಿ ರಕ್ಷಣೆಯಲ್ಲಿ ವಿದ್ಯರ‍್ಥಿಗಳ ಪಾತ್ರ ಬಹಳವಿದೆ ವಿದ್ಯರ‍್ಥಿಗಳು ಶಿಕ್ಷಣವಂತರಾಗಿ ನಾಡು ನುಡಿಯ ರಕ್ಷಣೆಯಲ್ಲಿ ಮುಂದಾಗಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಖ್ಯಾತ ವೈದ್ಯ ಡಾ. ಎ, ಎನ್ ಬಾಳಿ ಮಾತನಾಡಿ ಸಮಾಜದಲ್ಲಿ ಹಲವಾರು ಜನರು ಬಡವರಿದ್ದು ಅವರಿಗೆ ಸಹಾಯ ಸಹಕಾರ, ನೆರವು ನೀಡಿದಾಗ ಮಾತ್ರ ಸುಂದರ ಸಮಾಜ ನರ‍್ಮಿಸಲು ಸಾಧ್ಯವೆಂದು ಹೇಳಿದರು. ಸಾನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮಿಗಳು ಮಾತನಾಡಿ ಇಂದಿನ ವಿದ್ಯರ‍್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಹೊಂದಿ ಗುರು ಹಿರಿಯರಿಗೆ ಗೌರವ ನೀಡುವದರ ಜೊತೆಗೆ ಸಮಾಜ ಮೆಚ್ಚುವ ಕರ‍್ಯ ಮಾಡಬೇಕು ಎಂದು ನುಡಿದರು.

ವಿಮಲಾ ಅಂಗಡಿ ಪ್ರರ‍್ಥಿಸಿದರು, ಜ್ಯೋತಿ ದೇಶನೂರ ಸ್ವಾಗತಿಸಿದರು, ಪ್ರೇಮಕ್ಕ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಸವರಾಜ ತುಪ್ಪದ ಹಾಗೂ ಗೌರಮ್ಮ ರ‍್ಕಿ ನಿರೂಪಿಸಿದರು. ಬಣಜಿಗ ಸಮಾಜದ ಬೈಲಹೊಂಗಲ ತಾಲೂಕಾ ಪದಾಧಿಕಾರಿಗಳು ಸಲಹಾ ಸಮಿತಿ ಹಾಗೂ ಮಹಿಳಾ ಸಮಾಜದ ಪದಾಧಿಕಾರಿಗಳು ಸಮಾಜದ ಬಾಂಧವರು ಉಪಸ್ಥಿತರಿದ್ದರು. ಈ ಸಂರ‍್ಭದಲ್ಲಿ ಸಮಾಜದ ೪೫ ವಿದ್ಯರ‍್ಥಿಗಳನ್ನು ಸನ್ಮಾನಿಸಲಾಯಿತು.


Leave a Reply