Koppal

ಇಂದು ರಾಷ್ಟ್ರಾದ್ಯಂತ ವಾಲ್ಮೀಕಿ ಜಯಂತಿ ಆಚರಣೆ


ಗಂಗಾವತಿ:ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಪರಣ್ಣ ಮುನವಳ್ಳಿ ಅವರು ಗಂಗಾವತಿ ನಗರದ ವಾಲ್ಮೀಕಿ ಸರ್ಕಲ್ ನಲ್ಲಿ ತಾಲ್ಲೂಕು ಆಡಳಿತ ಹಾಗೂ ಶಾಸಕರು ವಾಲ್ಮೀಕಿ ಸಮಾಜದ ಹಿರಿಯರು ಹಾಗೂ ಯುವಕರು ಸೇರಿ ಜಯಂತಿಯನ್ನು ಆಚರಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ ಅವರು
ಈ ದಿನ ರಾಷ್ಟ್ರಾದ್ಯಂತ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡುತ್ತಿದ್ದೇವೆ.

ವಾಲ್ಮೀಕಿ ರಾಮಾಯಣ ಬರೆಯುವುದರ ಮೂಲಕ ಇವತ್ತು ಏನಾದರೂ ಕಲಿಯುವ ವಿಷಯವಿದ್ದರೆ ಅದು ಸಂಗೀತ ಇರಲಿ ಸಾಹಿತ್ಯ ಇರಲಿ ನಾಟಕ ಪುರಾಣ ಪ್ರವಚನಗಳು ಇರಲಿ ಎಲ್ಲವೂ ಮೂಲವಾಗಿ ಬಂದಿರುವುದು ವಾಲ್ಮೀಕಿ ರಾಮಾಯಣದಿಂದ ಎಂದು ಸಂತೋಷದಿಂದ ಹೇಳಲು ಬಯಸುತ್ತೇನೆ.
ಈ ಸಂದರ್ಭದಲ್ಲಿ SSLC ಯಲ್ಲಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಎಚ್. ಆರ್ .ಶ್ರೀನಾಥ್. ತಹಸೀಲ್ದಾರ್ ಯು .ನಾಗರಾಜ ಜಿ . ವೀರಪ್ಪ ಡಿವೈ.ಎಸ್ಪಿ ಉಜ್ಜನಕೊಪ್ಪ
ಪಿ.ಐ.ವೆಂಕಟಸ್ವಾಮಿ. ಬಿಇಓ ಸೋಮಶೇಖರ್ ಗೌಡ .ಇಓ ಮೋಹನ,ಸರ್ವೇಶ ಎಂ .ಜೋಗದ ನಾರಾಯಣಪ್ಪ. ವೀರಭದ್ರ ನಾಯಕ್. ಚೌಡ್ಕಿ ರಮೇಶ ಇನ್ನೂ ಅನೇಕ ಸಮಾಜದ ಹಿರಿಯರು ಹಾಗೂ ಯುವಕರು ಈ ಜಯಂತಿಯಲ್ಲಿ ಪಾಲ್ಗೊಂಡಿದ್ದರು

ಗಂಗಾವತಿ ವರದಿಗಾರ
ಹನುಮೇಶ ಬಟಾರಿ
9901465990


Leave a Reply