Koppal

ಕುಷ್ಟಗಿ ಅಂಬಾಭವಾನಿ ದೇವಸ್ಥಾನ ಕಟ್ಟಡದ ಕಾಮಗಾರಿಯ ಅನುದಾನಕ್ಕಾಗಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ ಸಮಾಜದ ಮುಖಂಡರು


ಕುಷ್ಟಗಿ ಅ 20: ಇಲ್ಲಿನ ಸಹಸ್ರಾರ್ಜುನ ಸೋಮವಂಶ ಕ್ಷತ್ರಿಯ ( ಎಸ್ ಎಸ್ ಕೆ) ಸಮಾಜದಿಂದ ನಿರ್ಮಾಣ ಹಂತದಲ್ಲಿ ಇರುವ ಶ್ರೀ ಅಂಬಾಭವಾನಿ ದೇವಸ್ಥಾನದ ಕಟ್ಟಡದ ಕಾಮಗಾರಿಗೆ ಅಂದಾಜು 87 ಲಕ್ಷ ರೂಪಾಯಿ ಮಾಡಲಾಗಿದ್ದು, ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಅವಶ್ಯಕತೆ ಇದ್ದು ಸಮಾಜದ ಎಲ್ಲಾ ಮುಖಂಡರು ಸೇರಿ ಇಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ಸಚಿವ ಹಾಲಪ್ಪ ಆಚಾರ್ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅನುದಾನದ ಲಭ್ಯತೆ ಕುರಿತು ಚರ್ಚಿಸಿ ಸಾಧ್ಯವಾದಷ್ಟು ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ರವೀಂದ್ರ ಬಾಕಳೆ ಗೌರವ ಅಧ್ಯಕ್ಷ ಪರಶುರಾಮ ನಿರಂಜನ್. ಡಾಕ್ಟರ್ ರವಿಕುಮಾರ್ ದಾನಿ,ವೆಂಕಟೇಶ್ ಕಾಟವಾ, ಗಣಪತಿ ಸಿಂಗ್ರಿ, ಆನಂದ್ ರಾಯಬಾಗಿ, ಸೇರಿದಂತೆ ಸಮಾಜದ ಪದಾಧಿಕಾರಿಗಳು ಸಚಿವರಿಗೆ ಮನವಿ ನೀಡಿ ಅಂಬಾಭವಾನಿ ದೇವಸ್ಥಾನ ಕಟ್ಟಡದ ನಿರ್ಮಾಣಕ್ಕೆ ಅಗತ್ಯವಾದ ಹಣಕಾಸಿನ ನೆರವನ್ನು ನೀಡಲು ಒತ್ತಾಯಿಸಿದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ

 


Leave a Reply