Belagavi

ಇತರೆ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟಿಸಿದ ಸಂಸದೆ ಅಂಗಡಿ


ಬೆಳಗಾವಿ: ಇಲ್ಲಿನ ತಿಲಕವಾಡಿಯಲ್ಲಿ ಆರೋಹಿ ಎಂಟರ್ಪ್ರೈಸಸ್ ಅವರು ಪ್ರಾರಂಭಿಸಿದ ನೂತನ ಮೈಸೂರು ಸ್ಯಾಂಡಲ್ ಸಾಬೂನು ಮತ್ತು ಇತರೆ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಇಂದು ಸಂಸದೆ ಮಂಗಲ ಅಂಗಡಿ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಂಸದೆ ಮಂಗಲ ಅಂಗಡಿ ಅವರು, ಮೈಸೂರು ಸ್ಯಾಂಡಲ್ ಸಾಬೂನು ಕರ್ನಾಟಕ ಸರ್ಕಾರದ ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ’ದಿಂದ ತಯಾರಾಗುವ ಸಾಬೂನಿನ ಒಂದು ಬ್ರ್ಯಾಂಡ್ ಆಗಿದ್ದು, ಸಂಪೂರ್ಣ ಗಂಧದೆಣ್ಣೆಯಿಂದ ತಯಾರಿಸಲಾಗುವ ಜಗತ್ತಿನ ಏಕೈಕ ಸಾಬೂನು ಎಂದು ಪ್ರಸಿದ್ಧವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಅಭಯ್ ಪಾಟೀಲ್, ಕೆ.ಎಂ. ವಿರೂಪಾಕ್ಷಪ್ಪ, ನಗರ ಸೇವಕ ನಿತಿನ್ ಜಾಧವ, ಮಹೇಶ್ ಬಿ. ಶಿರೂರು, ಸಿಎಂ ಸುವರ್ಣಕುಮಾರ, ಅರವಿಂದ, ನಾರಾಯಣ ಸ್ವಾಮಿ ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು.


Leave a Reply