Belagavi

ಅ.24 ರಂದು ಬೆಳಗಾವಿಯಲ್ಲಿ ವಿಕಲಚೇತರಿಗೆ ಉಚಿತ ಕೃತಕ ಕೈ ಕಾಲು ಜೋಡಣೆ


ಬೆಳಗಾವಿ: ರೋಟರಿ ಪರಿವಾರದ ವತಿಯಿಂದ ಇದೇ ಅಕ್ಟೋಬರ್ 24ರಂದು ಬೆಳಗಾವಿಯ ವಿಜಯಾ ಆರ್ಥೋ ಆಂಡ್ ಟ್ರಾಮಾ ಸೆಂಟರ್‍ನಲ್ಲಿ ವಿಕಲಚೇತರಿಗೆ ಉಚಿತ ಕೃತಕ ಕೈ ಕಾಲು ಜೋಡಣೆ ನಡೆಸಲಾಗುತ್ತಿದೆ ಎಂದು ರೋಟೇರಿಯನ್ ಅಶೋಕ ಮಳಗಲಿ ಮಾಹಿತಿ ನೀಡಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಶೋಕ ಮಳಗಲಿ ಅವರು ರೋಟರಿ ಪರಿವಾರ ಕಳೆದ 35 ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಈಗಾಗಲೇ ಕಳೆದ 2015ರಂದು 200 ಜನ ವಿಕಲಚೇತನರು, 2017ರಂದು 400 ಜನ ವಿಕಲಚೇತನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ರೋಟರಿ ಪರಿವಾರದವರು 2015ರಿಂದ ಕೃತಕ ಉಚಿತ ಕೈ ಕಾಲು ಜೋಡಣೆಯನ್ನು ಮಾಡಿಕೊಂಡು ಬಂದಿದ್ದೇವೆ. ಅದರಂತೆ ಈ ಬಾರಿ ಸುಮಾರು 500 ಜನ ವಿಕಲಚೇತನರು ಅರ್ಜಿ ಸಲ್ಲಿಸಿದ್ದಾರೆ. ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ವಿಕಲಚೇತನರು ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ರೋಟೇರಿಯನ್‍ಗಳಾದ ಅರವಿಂದ ಕಡಬಡಿ, ವಿನಯ ಬಾಳಿಕಾಯಿ, ಅಶೋಕ ನಾಯಕ, ಚಂದ್ರಕಾಂತ ರಾಜಮಾನೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply