Belagavi

ತಡೆಗೋಡೆಯ ಮೇಲೆ ಬಿದ್ದು ಅಪರಿಚಿತ ವ್ಯಕ್ತಿ ಸಾವು


ಬೆಳಗಾವಿ : ವ್ಯಕ್ತಿಯೋರ್ವ ಆಕಸ್ಮಿಕವಾಗಿ ಸಂಶಯಾಸ್ಪದ ರೀತಿಯಲ್ಲಿ ಸೇತುವೆಯೊಂದರ ಬದಿ ಇರುವ ತಡೆಗೋಡೆಯ ಮೇಲೆ ಬಿದ್ದು ಮೃತಪಟ್ಟಿರುವ ಘಟನೆ ನಗರ ಸಮೀಪದ ಬಸವನ ಕುಡಚಿ ಬಳಿ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಈತನು ಸೇತುವೆಗೆ ಇರುವ ತಡೆ ಗೋಡೆ ಮೇಲೆ ಹೇಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನುವದು ಮಾತ್ರ ಇನ್ನು ತಿಳಿದು ಬಂದಿಲ್ಲ. ರಸ್ತೆ ಬಳಿ ಇರುವ ಸೇತುವೆ ತಡೆಗೋಡೆ ಬಳಿ ಈತಬ ಮೇಲೆ ಯಾವದಾದರು ಅಜ್ಞಾತ ವಾಹನ ಹೊಡೆದು ಹೋಗಿರುವ ಶಂಕೆ ವ್ಯಕ್ತವಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಥವಾ ಯಾರಾದರು ಈನನ ಮೇಲೆ ಹಲ್ಲೆ ಮಾಡಿ ಹೊಡೆದು ಹೋಗಿದ್ದಾರೆ ಎನ್ನುವದು ಪೊಲೀಸ ತನಿಖೆಯಿಂದ ಮಾತ್ರ ಹೊರಬರಬೇಕಿದೆ. ಸ್ಥಳಕ್ಕೆ ಮಾಳಮಾರುತಿ ಪೊಲೀಸರು ದೌಡಾಯಿಸಿ ಪರಿಶೀಲನೆ
ನಡೆಸುತ್ತಿದ್ದಾರೆ.


Leave a Reply