Belagavi

ಜೈನ ಸಮಾಜದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ: ಕಠಿಣ ಕ್ರಮಕ್ಕೆ ಆಗ್ರಹ- ಕುಂತಿನಾಥ ಕಲಮನಿ


ಬೆಳಗಾವಿ: ಬಡ ಜೈನ ಸಮಾಜದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವುದನ್ನು ತಡೆಗಟ್ಟಬೇಕು. ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜೈನ ಯುವ ಸಂಘಟನೆಯ ನೇತೃತ್ವದಲ್ಲಿ ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಕೆಲ ಜೈನ ಸಮಾಜದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಹುನ್ನಾರ ನಡೆಸುತ್ತಿದ್ದ ಸಂದರ್ಭದಲ್ಲಿ
ನಮ್ಮ ಸಂಘಟನೆ ಹಾಗೂ ತಿಗಡೊಳ್ಳಿ ಗ್ರಾಮದ ಜೈನ ಸಮಾಜ ಬಾಂಧವರು ಸೇರಿ ಕ್ರಿಸ್ತ ಧರ್ಮಕ್ಕೆ ಮತಾಂತರ ಆಗುತ್ತಿದ್ದವರನ್ನು ತಡೆದು ಅವರ ಮನವೊಲಿಸಿ ಮತ್ತೆ ಮೂಲ ಜೈನ ಧರ್ಮದಲ್ಲಿರುವಂತಹ ವಾತಾವರಣ ಮೂಡಿಸಿ ಅವರು ಮತಾಂತರ ಆಗುವುದನ್ನು ತಪ್ಪಿಸಲಾಗಿದೆ, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಜೈನ ಯುವ ಸಂಘಟನೆಯ ಪದಾಧಿಕಾರಿಗಳು ಬೈಲಹೊಂಗಲ, ಕಿತ್ತೂರು ಮತ್ತು ಖಾನಾಪೂರ ತಾಲೂಕುಗಳಲ್ಲಿ ಪ್ರವಾಸ ಕೈಗೊಂಡಾಗ ಈ ಭಾಗಗಳಲ್ಲಿ ಮತಾಂತರ ಮಾಡುವ ಕಾರ್ಯ ಅತೀ ವೇಗದಲ್ಲಿ
ನಡೆಯುತ್ತಿರುವ ಬಗ್ಗೆ ಮಾಹಿತಿಗಳು ಸಂಘಟನೆಗೆ ಲಭ್ಯವಾಗಿವೆ. ಕೇವಲ ಜೈನ ಧರ್ಮಿಯರು ಅಷ್ಟೆ ಅಲ್ಲ, ಬೇರೆ ಬೇರೆ ಧರ್ಮಿಯರನ್ನು ಸಹ ಮತಾಂತರ ಮಾಡುವ ಹುನ್ನಾರ ಮತ್ತು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಈ ದಿಸೆಯಲ್ಲಿ ಕರ್ನಾಟಕ ಸರಕಾರ ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು. ಸರಕಾರ ತರಬಯಸುತ್ತಿರುವ ಮತಾಂತರ ನಿಷೇಧ ಕಾನೂನು ಜಾರಿಗೆ ಸಕಲ ಜೈನ ಸಮಾಜ ಎಲ್ಲ ರೀತಿಯಿಂದ ಸರಕಾರಕ್ಕೆ ಬೆಂಬಲ ಸೂಚಿಸುವುದರ ಜೊತೆಗೆ, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ
ಚಳಗಾಲ ಅಧಿವೇಶನದಲ್ಲಿ ಈ ಕಾನೂನುವನ್ನು ಕೂಡಲೆ ಜಾರಿಗೆ ತರಬೇಕೆಂದು ಸರಕಾರವನ್ನು ಆಗ್ರಹಿಸುತ್ತದೆ ಎಂದು ಕುಂತಿನಾಥ ಕಲಮನಿ ಅವರು  ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ ಪಿಡುಗುವನ್ನು
ತೊಡೆದು ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಮತಾಂತರ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜೈನ ಯುವ ಸಂಘಟನೆಯು ಜಿಲ್ಲಾಧಿಕಾರಿಗೆ ಆಗ್ರಹಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾನಿಕಬಾದ ಲ ದಿಗಂಬರ್ ಜೈನ್ ಭೊಡಿಂಗ್, ಜೀತು, ಮಹಿಳಾ ಮಂಡಳ ಸೇರಿದಂತೆ ಬೆಳಗಾವಿ ನಗರದ ಜೈನ್ ಭಸದಿಯ ಜೈನ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


Leave a Reply