Belagavi

ತುಕ್ಕಾನಟ್ಟಿ ಗ್ರಾಮದಲ್ಲಿ ಲಕ್ಷೀ ದೇವಿಯ ಸಭಾ ಭವನದಲ್ಲಿ ಕಾನೂನು ಅರಿವು ನೆರವು ಶಿಬಿರ


ಘಟಪ್ರಭಾ:;- ತಾಲೂಕಾ ಕಾನೂನು ಸೇವೆಗಳ ಸಮಿತಿ ಗೋಕಾಕ ಮತ್ತು ನ್ಯಾಯವಾದಿಗಳ ಸಂಘ ಮತ್ತು ಸಿವಿಲ್ & ಜೆಎಂಎಫ್ ಸಿ ನ್ಯಾಯಾಲಯ ಮೂಡಲಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಮೂಡಲಗಿ ಹಾಗೂ ಗ್ರಾಮ ಪಂಚಾಯತಿ ತುಕ್ಕಾನಟ್ಟಿ ಇವರ ಸಹಯೋಗದಲ್ಲಿ ತುಕ್ಕಾನಟ್ಟಿ ಗ್ರಾಮದಲ್ಲಿ ಲಕ್ಷೀ ದೇವಿಯ ಸಭಾ ಭವನದಲ್ಲಿ ಕಾನೂನು ಅರಿವು ನೆರವು ಶಿಬಿರ ನಡೆಯಿತು.

ಮುಖ್ಯ ಅಥಿತಿಯಾಗಿ ಆಗಮಿಸಿದ ಯಲ್ಲಪ್ಪ ಕಟ್ಟಿಕಾರ ನ್ಯಾಯವಾದಿಗಳು ಮಾತನಾಡಿ ಮಹಿಳೆಯರಿಗೆ ವರದಕ್ಷಿಣೆ ಪಿಡಗು ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯುವ ಬಗ್ಗೆ ಹೇಳಿದರು.
ನಂತರ ಮಕ್ಕಳ ಕಾನೂನು ಬಗ್ಗೆ ಪ್ರಸ್ಥಾಪಿಸಿದ ಅವರು ಬಾಲ್ಯ ವಿವಾಹ ಬಗ್ಗೆ ಮತ್ತು ಮಕ್ಕಳ ಕೈಯಲ್ಲಿ ವಾಹನಗಳನ್ನು ಕೊಡಬಾರದು ಎಂದು ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಇಂದಿರಾ ಭೋವಿ ಅವರು ಮಕ್ಕಳ ಕಲ್ಯಾಣ , ಬಾಲ್ಯ ವಿವಾಹ, ಕಾನೂನು ಅರಿವು ನೆರವು ಉಚಿತವಾಗಿ ಪಡೆದುಕೋಳ್ಳಬೆಕು ಎಂದು ಹೇಳಿದರು.
ಅಂಗನವಾಡಿ
ಮೆಲ್ವಿಚಾರಕಿ ಶ್ರೀಮತಿ ಡಿ. ಮೇಗೆರಿ ಅವರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿವುದು ಸೂಕ್ತ ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಕುಮಾರ ಮರ್ದಿ, ಉಪಾಧ್ಯಕ್ಷ ಮಹಾದೇವಿ ಗದಾಡಿ, ಗಾಪಂ ಸದಸ್ಯರಾದ ಸುನಂದಾ ಭಜಂತ್ರಿ, ತಿಪ್ಪಣ್ಣ ಹುಲಕುಂದ, ಗಂಗಪ್ಪ ಹಮ್ಮನ್ನವರ , ಗಾಯತ್ರಿ ಬಾಗೇವಾಡಿ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಅಂಗನವಾಡಿ ಶಿಕ್ಷಕಿಯರು ಆಶಾ ಕಾರ್ಯಕರ್ತೆರು ಮುಂತಾದವರು ಉಪಸ್ಥಿತರಿದ್ದರು. ಪಿಡಿಓ ವಿರಭಂದ್ರ ಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿ,ವಂದಿಸಿದರು.


Leave a Reply