Belagavi

ಕಾಂಗ್ರೆಸ್ ಕಡೆಗೆ ಹೆಜ್ಜೆ ಹಾಕಿದ ಅಶೋಕ ಪೂಜಾರಿ


ಬೆಳಗಾವಿ: ಬದಲಾವಣೆ ಆಗಬೇಕಾದರೆ ಪಕ್ಷದ ರಾಜಕಾರಣಬೇಕು. ಆ ದೃಷ್ಟಿಯಿಂದ ಸಂದರ್ಭಕ್ಕೆ ಅನುಸಾರವಾಗಿ ರಾಜಕಾರಣ ಮಾಡಬೇಕಾಗುವ ಅನಿವಾರ್ಯತೆಯಿದೆ. ಆದ ಕಾರಣದಿಂದ ಯಾವುದಾದರ ಶಕ್ತಿಯ ಜೊತೆಗೆ ಕೈ ಜೋಡಿಸಬೇಕಾಗುತ್ತದೆ. ಇವತ್ತು ಗೋಕಾಕದೊಳಗೆ ಕಾಂಗ್ರೆಸ್ ಜೊತೆ ಕೈ ಜೋಡಿಸಿದರೆ ಬದಲಾವಣೆಗೆ ನಾಂದಿ ಹಾಡಬಹುದು ಎಂದು ರಾಜಕೀಯ ಮುಖಂಡ ಅಶೋಕ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ ಪೂಜಾರಿ ಅವರು, ಗೋಕಾಕ ಉಪಚುನಾವಣೆ ಸಂದರ್ಭದಲ್ಲಿ ಉನ್ನತ ವಲಯದಿಂದ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ಆಗಬೇಕು ಎಂಬುವ ಭಾವನೆಯಿತ್ತು. ಆದ್ರೆ ಕಾರಣಾಂತರಗಳಿಂದ ನನಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. ಇನ್ನು ಕಾಂಗ್ರೆಸ್ ನಾಯಕರಿಗೆ ನನ ಬಗ್ಗೆ ಚಿಂತನೆ ಇತ್ತು, ತದನಂತರ ಕಳೆದ ಲೋಕಸಭಾ ಚುನಾವಣೆಯಲ್ಲಿ ಉನ್ನತ ವಲಯದ ಕಾಂಗ್ರೆಸ್ ನಾಯಕರು ಹಾಗೂ ಬೆಳಗಾವಿ ಜಿಲ್ಲೆಯ ಅನೇಕ ನಾಯಕರ ಮನಸ್ಸಿನಲ್ಲಿ ಅಶೋಕ ಪೂಜಾರ ಅವರು ಗೋಕಾಕ ಕ್ಷೇತ್ರದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷಕ್ಕೆ ಶಕ್ತಿಯನ್ನು ತುಂಬಬೇಕು ಎಂಬ ವಿಚಾರಯಿತ್ತು. ಅದಕ್ಕೆ ಪೂರ್ವಕವಾಗಿ ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಹೇಳಿದ್ರು. ಅವರು ಅಭಿಪ್ರಾಯದಂತೆ ನಾನು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕು ಎಂಬ ಉದ್ದೇಶದಿಂದ ಇತ್ತೀಚಿಗೆ ಮಾಜಿ ಸಿದ್ದರಾಮ್ಯ ಅವರನ್ನು ಭೇಟಿ ಆಗಿದ್ದೇನೆ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಅವರ ಮುಖಾಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಶೋಕ ಪೂಜಾರಿ ತಿಳಿಸಿದರು.

ಈ ಸಂದರ್ಭದಲ್ಲಿ ರಮೇಶ ಡವಳಿ, ಪ್ರವೀಣ್ ಪಾಟೀಲ್, ನಿಂಗಪ್ಪ ಪಾಟೀಲ್, ಅಜಯ ಮಾದಾಳಿ ಉಪಸ್ಥಿತರಿದ್ದರು.


Leave a Reply