Belagavi

ಅ.೨೪ ರಂದು ವಾರ್ಷಿಕ ಸಾಮಾನ್ಯ ಸಭೆ


ಬೆಳಗಾವಿ, ಅ.೨೧: ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ೨೦೨೦-೨೧ ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಅಕ್ಟೋಬರ್ ೨೪ ರಂದು ಬೆಳಿಗ್ಗೆ ೧೧.೩೦ ಕ್ಕೆ ಆಯೋಜಿಸಲಾಗಿದೆ.
ಸದರಿ ಸಭೆಯನ್ನು ಕೋವಿಡ್-೧೯ ರ ಹಿನ್ನೆಲೆಯಲ್ಲಿ ಒಕ್ಕೂಟದ ಆವರಣದಿಂದ ವರ್ಚುವಲ್ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ವಿವೇಕ ವಸಂತರಾವ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ.
ಈಗಾಗಲೇ ಎಲ್ಲ ಸದಸ್ಯರಿಗೆ ಸಭೆಯ ನೋಟಿಸ್ ಕಳುಹಿಸಲಾಗಿದೆ, ಅದು ತಲುಪದೇ ಇದ್ದಲ್ಲಿ, ಇದೇ ನೋಟಿಸ್ ಎಂದು ಪರಿಗಣಿಸಿ ಸಭೆಯಲ್ಲಿ ಭಾಗವಹಿಸಬೇಕು ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಶ್ರೀನಿವಾಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply