Koppal

ರಕ್ತದಾನ ಶ್ರೇಷ್ಠ ದಾನ – ತಹಶೀಲ್ದಾರ ಎಂ ಸಿದ್ದೇಶ ಹೇಳಿಕೆ


ಕುಷ್ಟಗಿ:ರಕ್ತದಾನ ಮಾಡುವುದರಿಂದ ಯಾವದೇ ಅಡ್ಡ ಪರಿಣಾಮ ಆಗುವುದಿಲ್ಲ ರಕ್ತದಾನಕ್ಕೆ ಆತಂಕ ಬೇಡ ಎಂದು ತಹಶೀಲ್ದಾರ್ ಎಂ ಸಿದ್ದೇಶ್ ಹೇಳಿದರು. ಅವರು ಇಲ್ಲಿನ ಅಗ್ನಿಶಾಮಕ ಠಾಣೆಯಲ್ಲಿ ತಾಲೂಕ ಗ್ರಹರಕ್ಷಕ ದಳ ಮತ್ತು ಅಗ್ನಿಶಾಮಕ ದಳದವರಿಗೆ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಬೇರೆ ಬೇರೆ ವಸ್ತುಗಳನ್ನು ಕೃತಕವಾಗಿ ಅಥವಾ ನೈಸರ್ಗಿಕವಾಗಿ ಸೃಷ್ಟಿಸಬಹುದು ಆದರೆ ರಕ್ತ ಮಾತ್ರ ಆ ರೀತಿಯಲ್ಲಿ ಸೃಷ್ಟಿಸಲು ಸಾಧ್ಯವಿಲ್ಲ ಕಾರಣ ಪ್ರಸಕ್ತ ದಿನಮಾನಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇದೆ ಈಗಿನ ಗ್ರಹ ರಕ್ಷಕರು ಮತ್ತು ಅಗ್ನಿಶಾಮಕ ಸಿಬ್ಬಂದಿ ಅವರು ರಕ್ತದಾನ ಶಿಬಿರವನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆ ಇಲ್ಲೂ ಇಂತಹ ಶಿಬಿರಗಳು ನಮ್ಮ ತಾಲೂಕಿನಲ್ಲಿ ನಡೆಯಲಿ ಯುವಜನರು ರಕ್ತದಾನಕ್ಕೆ ಮುಂದಾಗಲಿ ಎಂದು ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ್ ಬಿರಾದಾರ ಮಾತನಾಡಿ ಎಲ್ಲಾ ದಿನಗಳಿಗಿಂತಲೂ ರಕ್ತದಾನ ಮಹತ್ವದ್ದು ಪ್ರತಿಯೊಬ್ಬರು ರಕ್ತದಾನ ಮಾಡಲು ಹಿಂಜರಿಕೆ ಬೇಡ ಎಂದು ಹೇಳಿದರು.

ತಾಲೂಕ ವೈದ್ಯಾಧಿಕಾರಿ ಆನಂದ ಗೋಟೂರು ಮಾತನಾಡಿ ಆರೋಗ್ಯದ ದೃಷ್ಟಿಯಿಂದ ರಕ್ತದಾನ ಮಾಡಿದರೆ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು ಎಂದರು.

ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಡಾಕ್ಟರ್ ರವಿಕುಮಾರ್ ದಾನಿ, ತಾಲೂಕ ಆಸ್ಪತ್ರೆ ಹಿರಿಯ ರಕ್ತ ತಪಾಸಕರ ಆದ ಬಾಲಾಜಿ ಬಳಿಗಾರ್ ಮಾತನಾಡಿದರು. ಪ್ರಸ್ತಾವಿಕವಾಗಿ ಸೀನಿಯರ್ ಪ್ಲಾಟನ್ ಕಮಾಂಡರ್ ರವೀಂದ್ರ ಬಾಕಳೆ ಮಾತನಾಡಿ ಮಾನ್ಯ ಡಿಸಿಪಿ ಅವರ ಆದೇಶದಂತೆ ಜಿಲ್ಲಾ ಸಮಾದೇಷ್ಟರ ಸೂಚನೆಯ ಹಿನ್ನೆಲೆಯಲ್ಲಿ ಗೃಹರಕ್ಷಕ ರಿಂದ ರಕ್ತದಾನ ಶಿಬಿರ ಸಲಾಗಿದ್ದು ಕುಷ್ಟಗಿ ತಾವರಗೇರಾ ಹನುಮಸಾಗರ ಗೃಹರಕ್ಷಕ ರಕ್ತದಾನ ಮಾಡಲು ಉತ್ಸುಕರಾಗಿದ್ದಾರೆ ಇತ್ತೀಚಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಬಹಳ ಇರುವುದರಿಂದ ಈ ಕಾರ್ಯಕ್ರಮ ಸಲಾಗಿದೆ ಎಂದು ಹೇಳಿದರು.ಸ್ವಾಗತವನ್ನು ಅಗ್ನಿಶಾಮಕ ಠಾಣಾಧಿಕಾರಿ ರಾಜು ನೆರವೇರಿಸಿದರು. ವೇದಿಕೆಯ ಮೇಲೆ ಪ್ಲಾಟೂನ್ ಕಮಾಂಡರ್ ನಾಗರಾಜ್ ಬಡಿಗೇರ್, ಘಟಕದ ಘಟಕ ಅಧಿಕಾರಿ ಶಿವಪ್ಪ ಚೂರಿ, ತಾವರಗೇರಾ ಘಟಕ ಅಧಿಕಾರಿ ರವೀಂದ್ರ ಬಳಗಾರ, ಹನುಮಸಾಗರದ ಹನುಮಂತಪ್ಪ ಮಡಿವಾಳರ, ಸೇರಿ ಗೃಹರಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply