Belagavi

ಕಿತ್ತೂರು ಚನ್ನಮ್ಮ ಇಂದು ಸ್ತಿçà ಕುಲಕ್ಕೆ ಮಾದರಿ : ಕಡಾಡಿ


ಮೂಡಲಗಿ: ಸೂರ್ಯ ಮುಳುಗದ ಬ್ರೀಟಿಷ್ ಸಾಮ್ರಾಜ್ಯಕ್ಕೆ ಸವಾಲು ಹಾಕಿ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪ್ರಥಮ ಸ್ವಾತಂತ್ರö್ಯದ ಕಿಚ್ಚು ಹಚ್ಚಿಸಿದ ಕೀರ್ತಿ ವೀರ ರಾಣಿ ಕಿತ್ತೂರ ಚನ್ನಮ್ಮಗೆ ಸಲ್ಲುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ವೀರ ಸೇನಾನಿ ರಾಣಿ ಕಿತ್ತೂರ ಚನ್ನಮ್ಮ ಅವರ ೨೪೩ನೇ ಜಯಂತಿ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದ ಅವರು ಸ್ವಾತಂತ್ರ‍್ಯ ಹೋರಾಟದ ಬೆಳ್ಳಿ ಚುಕ್ಕಿ ಎಂದು ಕರೆಸಿಕೊಳ್ಳುವ ಚನ್ನಮ್ಮ ಇಂದು ಸ್ತಿçà ಕುಲಕ್ಕೆ ಮಾದರಿಯಾಗಿದ್ದಾರೆ ಎಂದರು.
ಈ ಹಿಂದೆ ಸನ್ಮಾನ್ಯ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಕಿತೂರು ಕೋಟೆ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ೨೦೦ ಕೋಟಿ ರೂ. ಬಿಡುಗಡೆ ಮಾಡಿದ್ದು, ಬರಲಿರುವ ದಿನಗಳಲ್ಲಿ ಚನ್ನಮ್ಮ ಆಳಿದ ಕಿತ್ತೂರು ಪ್ರದೇಶ ಒಂದು ಐತಿಹಾಸಿಕ ಪ್ರೇಕ್ಷಣಿಯ ಸ್ಥಳ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೇವಾ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಡಾಡಿ, ಸಹಕಾರಿಯ ಶಿವಪ್ಪ ವ್ಯಾಪಾರಿ, ಸಿದ್ದಣ್ಣ ಹೆಬ್ಬಾಳ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಂಜುಳಾ ಹಿರೇಮಠ, ಸುಗಂದಾ ಗೊರಗುದ್ಧಿ, ಪಾರ್ವತಿ ಬಿ.ಪಾಟೀಲ, ಈರಣ್ಣ ಮುನ್ನೊಳ್ಳಿಮಠ, ಮಹಾಂತೇಶ ಬಿ.ಪಾಟೀಲ ಸೇರಿದಂತೆ ಅನೇಕ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.


Leave a Reply