Belagavi

ಬುಡಾ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಮೊದಲ ಸಭೆ


ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ( ಬುಡಾ) ದ ಸಭಾಂಗಣದಲ್ಲಿ ನೂತನ ಅಧ್ಯಕ್ಷ ಸಂಜಯ ಬೆಳಗಾವಂಕರ ನೇತೃತ್ವದಲ್ಲಿ ಸಭೆಯನ್ನು ಹಮ್ಮಿಕೊಳ್ಳುವುದರ ಮೂಲಕ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಯೋಜನೆ ಸಂಖ್ಯೆ 61ರಲ್ಲಿ ಭೂಮಿಯನ್ನು ಸಮಪಟ್ಟು ಮಾಡಿ ನಿವೇಶನ ಗುರುತಿಸುವುದು, ಯೋಜನೆಯ ಅಭಿವೃದ್ಧಿ ಕಾಮಗಾರಿಗಳ, ಅಪಾರ್ಟ್ಮೆಂಟ್ ಮನೆಗಳ ನಿರ್ಮಾಣದ ಸಲುವಾಗಿ ಪಿಎಂಸಿ ನೇಮಿಸುವ ಕುರಿತು ಚರ್ಚೆ ನಡೆಸಲಾಯಿತು.

ವಿವಿಧ ಪಕ್ಷಗಳ ಮುಖಂಡರು ನಡೆಸಿದ ಹೋರಾಟದ ಫಲವಾಗಿ ಸಭೆ ನಡೆದಿದ್ದು ಬುಡಾದಿಂದ ನಿರ್ಮಿಸಲಾಗಿರುವ ಎಚ್.ಡಿ.ಕುಮಾರಸ್ವಾಮಿ ಲೇವೌಟ್ ನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ವಿಷಯವ ಪ್ರಸ್ತಾಪವಾಯಿತು‌. ಅಲ್ಲದೆ ಹಾಕಿ ಇಂಡಿಯಾ ಅಸೋಸಿಯೇಷನ್ ನಿಂದ ಪಡೆದ ಹಾಕಿ ಕ್ರೀಡಾಂಗಣ ನಿರ್ಮಾಣ ಮಾಡುವ ವಿಷಯವನ್ನು‌ ಸಹ ಚರ್ಚಿಸಲಾಯಿತು.

ಸಭೆಯಲ್ಲಿ ಬಹುತೇಕ ಸದಸ್ಯರು ಹಾಗೂ ಅಧಿಕಾರಿಗಳು, ಶಾಸಕ ಅನಿಲ್ ಬೆನಕೆ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply