Belagavi

ನಿವೇಶನ ಹಂಚಿಕೆ ಬಗ್ಗೆ ಇನ್ನೂ ಎಲ್ಲೂ ಪ್ರಾರಂಭವಾಗಿಯೇ ಇಲ್ಲ : ಅಭಯ ಪಾಟೀಲ್


ಬೆಳಗಾವಿ: ಬುಡಾ ಸಭೆ ಯಾವತ್ತೂ ಬಂದ್ ಆಗಿಲ್ಲ. ಯಾವಾಗ ಶಾಸಕರನ್ನು ಕೇಳಿ ಸಭೆಯನ್ನು ಫಿಕ್ಸ್ ಮಾಡಿದ್ದಾರೆ ಆವಾಗ ಸಭೆಗಳು ನಡೆದಿದ್ದಾವೆ ಎಂದು ಶಾಸಕ ಅಭಯ ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ಬೆಳಗಾವಿ ನಗರದಲ್ಲಿ ಮಾದ್ಯಮರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಯ ಪಾಟೀಲ್ ಅವರು, ನಿವೇಶನ ಹಂಚಿಕೆ ಬಗ್ಗೆ ಇನ್ನೂ ಎಲ್ಲೂ ಪ್ರಾರಂಭವಾಗಿಯೇ ಇಲ್ಲ. ಇನ್ನು ನಿವೇಶನ ಹಂಚಿಕೆ ಬಗ್ಗೆ ಗದ್ದಲ ಯಾರು ಸೃಷ್ಟಿ ಮಾಡ್ತಿದ್ದಾರೆ, ನಿಮಗೆ ಯಾರು ಪತ್ರಿಗೆ ಹೇಳಿಕೆ ನೀಡುತ್ತಾರೆ ಅವರನ್ನೇ ಕೇಳು… ಇವತ್ತಿನ ಸಭೆಯಲ್ಲಿ ಇನ್ನ ಕ್ಯಾಪ್ಟನ್ ಗ ಹೋಗಬೇಕು ಪಿಎಂಸಿ ನೇಮಿಸಿಲ್ಲ ಅಂತಹ ನನಗೂ ಗೊತ್ತಿರಲಿಲ್ಲ ಸಭೆಯಲ್ಲಿ‌ ಹೇಳಿದ್ದಾರೆ. ಅದೇ ಮೊದಲು ಕ್ಯಾಪ್ಟನ್ ಗೆ ಕಳುಹಿಸಿ ಅಪ್ರೊಲ್ ತುಗೊಂದು ಟೆಂಡರ್ ಕರೆಯಬೇಕು. ಆದ್ರೇ ಇನ್ನತನಕ ಟೆಂಡರನ್ನೇ ಕರೆದಿಲ್ಲ ಎಂದು ಹೇಳಿದರು.

ಇನ್ನು ನಿವೇಶನ ಹಂಚಿಕೆ ಕುರಿತು 30 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದ್ದಾರೆ. ಆದರೆ ಜನರ ಬೇಡಿಕೆ ಬಾಳ ಇದೆ. ಇನ್ನು 25 ಎಕರೆ ಜಮೀನಿನಲ್ಲಿ ಮುಂದಿನ ವಾರದಲ್ಲಿ ಪ್ಲಾಟ್ ಕೊಡಿ ಅಂತಹ ರೈತರು ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಕೋರ್ಟ್ ನಲ್ಲಿ ಕೇಸ್ ಇದೆ ಆದ್ದರಿಂದ ಪ್ಲಾಟ್ ಕೊಡುವುದಕ್ಕೆ ಆಗುವುದಿಲ್ಲ. ಆದ್ರೆ ನನ್ನ ಕಡೆ ಇದ್ದ ಮಾಹಿತಿ ಹೇಳಿದ್ದೇನೆ. ಜನರನ್ನು ತಪ್ಪು ಮಾಹಿತಿ ಕಡೆ ತುಗೊಂದು ಹೋಗುವುದು ಏನ್ ಅರ್ಥಯಿದೆ ಎಂದು ಹೇಳಿದರು.


Leave a Reply