Belagavi

ಶಿಕ್ಷಣದಿಂದ ಭವಿಷ್ಯವನ್ನು ನಾವು ರೂಪಿಸಬಹುದು: ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ


ಯರಗಟ್ಟಿ: ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಯರಗಟ್ಟಿ ಪಟ್ಟಣದಲ್ಲಿ ಸಿ.ಎಂ. ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡ ಉದ್ಘಾಟನೆ ಹಾಗೂ ತಾಲೂಕು ಪಂಚಾಯತ್ 15ನೇ ಹಣಕಾಸು ಯೋಜನೆಯಡಿಯಲ್ಲಿ ನಿರ್ಮಿಸಿದ ವಿವಿಧ ಕಟ್ಟಡಗಳ ಉದ್ಘಾಟನೆ ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿದ ವಿಧಾನಸಭಾ ಉಪಸಭಾಧ್ಯಕ್ಷರಾದ ಶ್ರೀ ಆನಂದ ಚಂದ್ರಶೇಖರ ಮಾಮನಿ ಅವರು ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲರೂ ಉನ್ನತಮಟ್ಟದ ಶಿಕ್ಷಣವನ್ನು ಕೊಡಬೇಕು ಅದಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ನಮ್ಮ ಸರಕಾರದಿಂದ ನಾನು ಒದಗಿಸಿ ಕೊಡುತ್ತೇನೆ.
ನಾವು ಕಲಿತ ಶಾಲೆ ನಮ್ಮ ಗುರುಗಳು ನಾವು ಕಲಿಸಿದ ಮಕ್ಕಳು ಮುಂದೆ ಬಂದಾಗ ಇವೆಲ್ಲವೂ ಮರೆಯಲಾಗದ ನೆನಪುಗಳು ಬರುತ್ತವೆ ಅದಕ್ಕಾಗಿ ಯಾವುದೇ ಜಾತಿ, ಮತ, ಧರ್ಮ, ಪಂಥ, ಎಂಬ   ಭೇದವಿಲ್ಲದೆ ಒಳ್ಳೆಯ ರೀತಿಯಾದ ಶಿಕ್ಷಣವನ್ನು ಕೊಡಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಸುಸಜ್ಜಿತ ಆಟದ ಮೈದಾನ ಕುಡಿಯುವ ನೀರು ವೈಫೈ ಇಂಟರ್ನೆಟ್ ಕನೆಕ್ಷನ್ ಇವೆಲ್ಲವನ್ನೂ ಆದಷ್ಟು ಬೇಗನೆ ಕೆಲಸ ಮಾಡಿಕೊಡುತ್ತೇವೆ ಇಲ್ಲಿ ಒಂದು ಒಳ್ಳೆಯ ವಾತಾವರಣ ಇದೆ ಇಂತಹ ಗಾಳಿ ಪರಿಸರ, ಇಲ್ಲಿ ಕಲಿತಂತ  ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಲು ಶಿಕ್ಷಕರು ಶ್ರಮಿಸಬೇಕು.ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ನಾನು ಉನ್ನತ ಶಿಕ್ಷಣ ಮಂತ್ರಿಗಳ ಜೊತೆಗೆ ಮಾತನಾಡಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡುತ್ತೇನೆ. ನಮ್ಮ ಮತ ಕ್ಷೇತ್ರದಲ್ಲಿ ಇರುವ ಜನರು ಶಿಕ್ಷಣದಿಂದ ವಂಚಿತರಾಗಬಾರದು ಅದಕ್ಕಾಗಿ ಮಕ್ಕಳಿಗೆ ನಾವು ಹೆಚ್ಚಿನ ವಿದ್ಯಾ ಸವನ್ನು ಕೊಡುವುದರ ಜೊತೆಗೆ ಅವರಿಗೆ ಒಳ್ಳೆಯ ಶಿಕ್ಷಣವನ್ನು ಕೊಡಬೇಕು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಅಜೀತ ದೇಸಾಯಿ, ಸವದತ್ತಿ ಯಲ್ಲಮ್ಮ ಟ್ರಸ್ಟ್ ಅಧ್ಯಕ್ಷರಾದ ಬಸಯ್ಯ ಹಿರೇಮಠ, ಯರಗಟ್ಟಿ ತಾಲೂಕ ತಹಸೀಲ್ದಾರ ರಾದ ಎಮ್. ಎನ್. ಮಠದ, ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಯಾದ ಯಶವಂತಕುಮಾರ, ಪ್ರಾಂಶುಪಾಲರಾದ ಶ್ರೀ ಮಹಾಂತೇಶ ತಂಬಾಕೆ, ಕಾಲೇಜು ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರುಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು,  ಸದಸ್ಯರುಗಳು, ಇನ್ನಿತರ ಗಣ್ಯ ವ್ಯಕ್ತಿಗಳು,ಪ್ರಮುಖರು,  ಕಾಲೇಜಿನ ಎಲ್ಲ ಸಿಬ್ಬಂದಿ ಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಮತ್ತಿತರು ಉಪಸ್ಥಿತರಿದ್ದರು.

Leave a Reply