Belagavi

ಭಿನ್ನ ವಿಭಿನ್ನ ಸೃಜನಾತ್ಮಕ ಚಟುವಟಿಕೆಗಳೊಂದಿಗೆ ಯಶಸ್ವಿಯಾಗಿ ನಡೆದ ಅಂದು ಇಂದು ಕಾರ್ಯಕ್ರಮ


ಸವದತ್ತಿ ೨೫ ಎಸ್ ಕೆ ಹೈಸ್ಕೂಲ್‌ನಲ್ಲಿ ಹಾಗೂ ಬಿ.ವಿ ಮಮದಾಪುರ ಶಾಲೆಯಲ್ಲಿ ೧೯೮೭-೧೯೮೮ರ ಇಸವಿಯಲ್ಲಿ ಕಲಿತಿರುವ ೧೦ನೇಯ ತರಗತಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಉಮಾಚಂದ್ರ [ಸುಳ್ಳದ] ರವರ ಮಂಗಲಕಾರ್ಯಾಲಯದಲ್ಲಿ ಪರಿವಾರದವರೊಂದಿಗೆ ಹಮ್ಮಿಕೊಂಡ ೫ನೇಯ ಅಂದು ಇಂದು ಕಾರ್ಯಕ್ರಮವು ಭಿನ್ನ ವಿಭಿನ್ನ ಸೃಜನಾತ್ಮಕ ಚಟುವಟಿಕೆಗಳೊಂದಿಗೆ ಯಶಸ್ವಿಯಾಗಿ ನಡೆಯಿತು ವಿದ್ಯಾರ್ಥಿ ವಿದ್ಯಾರ್ಥಿನಿಯರೆ ಧ್ವಜಾರಹಣ ಮಾಡುವುದರ ಮೂಲಕ ಹಾಗೂ ಜ್ಯೋತಿ ಬೇಳಗಿಸುವುದರ ಮೂಲಕ ಅಂದು ಇಂದು ಕಾರ್ಯಕ್ರಮವÀನ್ನು ಉದ್ಘಾಟಿಸಿದರು
ಕಲ್ಯಾಣ ಮಂಠಪದ ಮುಂಬಾಗದಲ್ಲಿ ಸತೀಶ ಹಂಪಣ್ಣವರ ಹಾಗೂ ವಿಶ್ವೇಶ್ವರಯ್ಯ ಹೀರೆಮಠ ರವರು ಹಳ್ಳಿ ಸೊಗಡಿನ ಚಿತ್ರಣವನ್ನು ಮತ್ತು ತಾವು ಶಾಲೆ ಕಲೆಯುವ ಸಂದರ್ಭದಲ್ಲಿ ಶಾಲೆಗಳ ಅಕ್ಕಪಕ್ಕದಲ್ಲಿನ ಅಂಗಡಿಗಳಲ್ಲಿನ ತಿಂಡಿ ತಿನಿಸುಗಳನ್ನು ೫ಪೈಸೆ ೧೦ ಪೈಸೆ ೨೫ ಪೈಸೆ ೫೦ಪೈಸೆಗೆ ನೀಡುವದರೊಂದಿಗೆ ಈಗಿನ ಚಿಕ್ಕ ಚಿಕ್ಕ ಮಕ್ಕಳಿಗೆ ಹಳೇಯ ನಾಣ್ಯಗಳನ್ನು ಪರಿಚಯಿಸುವ ಕಾರ್ಯವನ್ನು ಮಾಡಿದರು
ನಂತರ ಕಾರ್ಯಕ್ರಮದ ಪ್ರಾರಂಭದಲ್ಲಿ ಈಶ್ವರ ಯಾದವಾಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಸುರೇಶ ಬೇಟಗೆರಿ ಸಂಗಡಿಗರು ಭಕ್ತಿಗೀತೆ ಹಾಡಿದರುನಂತರ ಅಂದು ಇಂದು ಕಾರ್ಯಕ್ರಮ ನಡೆಯಲು ಸಹಾಯಮಾಡಿ ಪ್ರೊತ್ಸಾಹಿಸಿದ ಸುಳ್ಳದ ಪರಿವಾರದವರಿಗೆ ಸನ್ಮಾನಿಸಿ ಗೌರವಿಸಿದರು ನಂತರ ನಿ ಓಂ ತಂಡದ ವತಿಯಿಂದ ಶ್ರೀರಕ್ಷಾ ಮತ್ತು ಎಮ್ ಸಿ ಸಂಜನಾ ಮನರಂಜನೆ ಕಾರ್ಯಕ್ರಮಗಳನ್ನು ನಡೆಯಿಸಿಕೊಟ್ಟರು


Leave a Reply