Belagavi

ಉಪನ್ಯಾಸ ಮತ್ತು ಸತ್ಕಾರ ಸಮಾರಂಭ


ಬೆಳಗಾವಿ: ವಾರ್ಷಿಕೋತ್ಸವ ನಿಮಿತ್ಯ ಬೆಳಗಾವಿಯ ಶಿವಬಸವನಗರದ ಶಿವಾನುಭವ ಮಂಟಪದಲ್ಲಿ ವಿಶೇಷ ಉಪನ್ಯಾಸ ಮತ್ತು ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಮಠದ ದಿವ್ಯ ಶಕ್ತಿಗಳಾಗಿದ್ದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಪ್ರಾಂಗಣದಲ್ಲಿರುವ ಮೂರ್ತಿಯ ಸುತ್ತಮುತ್ತಲಿನ ಪ್ರದೇಶವನ್ನು ಶಾಸಕರ ಅನುದಾನದಡಿ ನವೀಕರಿಸಿದ ಪ್ರದೇಶವನ್ನು ಉದ್ಘಾಟಿಸಿದರು.

ನೂರಾರು ಸಂಖ್ಯೆಯಲ್ಲಿ ಭಕ್ತರು ಪ್ರವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಗದಗದ ಪಂಡಿತ್ ಕಲ್ಲಿನಾಥ ಶಾಸ್ತ್ರಿಗಳು ಜೀವನ ದರ್ಶನ ಕುರಿತು ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟರು.

ಈ ವಿಶೇಷ ಕಾರ್ಯಕ್ರಮದಲ್ಲಿ ಗಿರೀಶ್ ಉಪ್ಪಿನ್, ಪರಶುರಾಮ್, ಪರಮಪೂಜ್ಯ ಮಹಾಂತ ದೇವರು, ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಶ್ರೀಮಠದ ಶಿವಯೋಗಿ ಮಹಾಸ್ವಾಮಿಗಳು, ಶರಣ ವಿಕೆ ಪಾಟೀಲ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.


Leave a Reply