Belagavi

ಪ್ರತಿಯೊಬ್ಬ ಮಗುವಿನಲ್ಲಿ, ಛಲ, ಪ್ರತಿಭೆ, ಬುದ್ಧಿವಂತಿಕೆ ಇರುತ್ತೆ: ಭಾಗ್ಯಶ್ರೀ


ಬೆಳಗಾವಿ: ಪ್ರತಿಯೊಬ್ಬ ಮಗುವಿನಲ್ಲಿ, ಛಲ, ಪ್ರತಿಭೆ ಮತ್ತು ಬುದ್ಧಿವಂತಿಕೆ ಇರುತ್ತೆ ಅದನ್ನು ಹೊರಗಡೆ ತರುವ ಕೆಲಸ ಪಾಲಕರಾಗಿ ನೀವು ಮಾಡಬೇಕಾಗಿದೆಂದು ನಾನು ಬಯಸುತ್ತೆನೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ ಅವರು ಅಭಿಪ್ರಾಯಪಟ್ಟರು.

ಬೆಳಗಾವಿ ನಗರದ ಶಿವಬಸವ ನಗರದಲ್ಲಿ ಅಂಗಾಯತ ಭವನದಲ್ಲಿ ಲಿಂಗಾಯತ ಮಹಿಳಾ ಸಂಘಟನೆಯ ವತಿಯಿಂದ ಆಯೋಜಿಸಿದ ಪಾರಂಪರಿಕ ತಿಂಡಿ ಸ್ಪರ್ಧೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇವಾಗ ನಮ್ಮ ಮಕ್ಕಳಿಗೆ ಯಾವ ರೀತಿ ಮಾರ್ಗದರ್ಶನ ನೀಡಬೇಕಾಗಿದೆ ಎಂದ್ರೆ..! ಇವಾಗಿ‌ನಿಂದ ಪಾಲಕರು ದೃಢ ನಿರ್ಧಾರ ಮಾಡುಕೊಳ್ಳಿ, ಇವತ್ತಿನ ವ್ಯವಸ್ಥೆ ಯಾವ ರೀತಿಯಿದೆ ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಮಗುವನ್ನು ಒಳ್ಳೆ ಮಾರ್ಗದಲ್ಲಿ ಬೆಳಿಸಿ. ಇನ್ನು ಇತಿಹಾಸ ಕಲಿತರೆ ಇತಿಹಾಸ ಸೃಷ್ಟಿಸಬಹುದು. ಇತಿಹಾಸ ಓದಲು ಒಂದು ಉದ್ದೇಶವಿದೆ. ಅಂದ್ರೆ ನಮ್ಮ ಭಾರತದ ವೈಭವ, ನಮ್ಮ ಇತಿಹಾಸ, ನಮ್ಮ‌ ಪೀಳಿಗೆ, ಸಮಯ ಎಲ್ಲವನ್ನೂ ಬದಲಾವಣೆ ಆಗುತ್ತಿರುತ್ತದೆ. ಆದ್ದರಿಂದ ನಮ್ಮ ಕಲ್ಚರ್ ವನ್ನು ಮರೆಯಬಾರದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ನೇಹಾ ನೆರ್ಲಿ ಅವರು ಅಂಗಾಂಗ ದಾನ ಕುರಿತು ತಯಾರಿಸಿದ ಕಿರುಚಿತ್ರ ಟ್ರೈಲರ್ ಸ್ಕ್ರೀನ್ ಮೂಲಕ ಪ್ರದರ್ಶನ ಮಾಡಲಾಯಿತು. ಬಳಿಕ ಅಂಗಾಂಗ ದಾನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ನಂತರ ಅಲಂಕಾರಿಕ ಸಸ್ಯಗಳ ಕುರಿತು ದೀನ್ ಸಂಬರಗಿಮಠ ವಿಶೇಷ ಉಪನ್ಯಾಸ ನೀಡಿದರು.

ನಂತರ ಪಾರಂಪರಿಕ ತಿಂಡಿ ಪದಾರ್ಥಗಳನ್ನು ಮಾಡಿದ ಸ್ಪರ್ಧಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಡುಗೆ ಸ್ಪರ್ಧಾ ಸದಸ್ಯರಿಗೆ ನಿರ್ಣಾಯಕರಾಗಿ ಸೌಮ್ಯಾ ಪಾಟೀಲ್, ವೈಶಾಲಿ ಫಿರಾಲಿ ಅವರು ವಹಿಸಿದ್ದರು.

ಲಿಂಗಾಯತ ಮಹಿಳಾ ಸಂಘಟನೆಯ ಅಧ್ಯಕ್ಷೆ ಶಾಂತಾ ಮಸೂತಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮ ವೇದಿಕೆಯಲ್ಲಿ ಲಿಂಗಾಯತ ಮಹಿಳಾ ಸಂಘಟನೆಯ ಸಂಸ್ಥಾಪಕಿ ಶೈಲೆಜಾ ಬಿಂಗೆ, ರತ್ನಪ್ರಭಾ ಬೆಲ್ಲದ, ಶೈಲಾ ಪಾಟೀಲ್, ಜೈಯಶೀಲಾ ಬ್ಯಾಕಕೋಡ, ಗೀತಾ ಮಲ್ಲಾಪೂರ, ಜ್ಯೋತಿ ಬದಾಮಿ, ಡಾ. ಭಾರತಿ ಮಠದ, ಸುನಿತಾ ದೇಶಾಯಿ ಉಪಸ್ಥಿತರಿದ್ದರು. ಪಾರಂಪರಿಕ ತಿಂಡಿ ಸ್ಪರ್ಧೆ ಸದಸ್ಯೆಯರಿದ್ದರು.

ಲಿಂಮಸಂ ಅಧ್ಯಕ್ಷೆ ಸ್ವಾಗತಿಸಿದರು. ಕಾರ್ಯದರ್ಶಿ ಸಂಗೀತಾ ಅಕ್ಕಿ ಅವರು ನಿರೂಪಿಸಿದರು. ಉಮಾ ರುದ್ರಗೌಡರ ವಂದಿಸಿದರು.


Leave a Reply