Belagavi

ಬೆಳಗಾವಿಯಲ್ಲಿ 24×7 ನೀರು ಸರಬರಾಜು ಯೋಜನೆಗೆ ಚಾಲನೆ


ಬೆಳಗಾವಿ: ವಿಶ್ವ ಬ್ಯಾಂಕ್ ಸಹಾಯ, ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ (KUWSMP) ಯೋಜನೆಯಡಿ ಬೆಳಗಾವಿ ಮಹಾನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ 24×7 ನಿರಂತರ ನೀರು ಸರಬರಾಜು ಯೋಜನೆಗೆ ಸಂಸದೆ ಮಂಗಲ ಅಂಗಡಿ ಚಾಲನೆ ನೀಡಿದರು.

ಬೆಳಗಾವಿಯ ಬಸವನಕೊಳ್ಳದಲ್ಲಿ ನಿರ್ಮಾಣವಾಗುತ್ತಿರುವ ನೆಲ ಮಟ್ಟದ ಹಾಗೂ ಮೇಲ್ಮಟ್ಟದ ಜಲ ಸಂಗ್ರಹಗಾರ ಮತ್ತು ಪಂಪುಮನೆ ನಿರ್ಮಾಣದ ಕಟ್ಟಡ ಕಾಮಗಾರಿಗೆ ಇಂದು ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಅನಿಲ್ ಬೆನಕೆ, ಮಾಜಿ ಮೇಯರ್ ಚಿಕ್ಕಲದಿನ್ನಿ, ಮುರುಘೇಂದ್ರ ಪಾಟೀಲ್, ಕಾರ್ಪೋರೇಷನ್ ಕಮಿಷನರ್ ಗಾಲಿ, ಮಹಾನಗರ ಪಾಲಿಕೆ ಸದಸ್ಯರು, ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply