Belagavi

ಕನ್ನಡ, ಕರ್ನಾಟಕ ಬರೀ ಭಾಷೆಯಲ್ಲ, ಬರೀ ನೆಲವಲ್ಲ ಅದೊಂದು ಭಾವನಾತ್ಮಕ ಸಂಬAಧ.


ಮೂಡಲಗಿ: ಕನ್ನಡ, ಕರ್ನಾಟಕ ಬರೀ ಭಾಷೆಯಲ್ಲ, ಬರೀ ನೆಲವಲ್ಲ ಅದೊಂದು ಭಾವನಾತ್ಮಕ ಸಂಬAಧ. ಎಂದೂ ಬಿಡಿಸಲಾರದ ಬಾಂಧವ್ಯ, ಕರುನಾಡು ಎಂಬ ಪದವೇ ಅಮೃತಕ್ಕೆ ಸಮಾನ ಎಂದು ಬಿಇಓ ಅಜೀತ ಮ£್ನಕೇರಿ ಹೇಳಿದರು.
ಗುರುವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ತಾಲೂಕಾಡಳಿತದಿಂದ ಆಯೋಜಿಸಲಾದ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಹಮ್ಮಿಕೊಳ್ಳಲಾಗಿರುವ ಕನ್ನಡಕ್ಕಾಗಿ ನಾವು ಎಂಬ ಅಭಿಯಾದ ಅಂಗವಾಗಿ ಮಾತಾಡ್ ಮಾತಾಡ್ ಕನ್ನಡ ಘೋಷವಾಕ್ಯದಡಿಯಲ್ಲಿ ನಡೆಯುತ್ತಿರುವ ಐದು ಲಕ್ಷ ಕಂಠಗಳ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೆಂಬರ್ ಒಂದರAದು ಕನ್ನಡಾಂಬೆಯ ಭಾವಚಿತ್ರದ ಮೆರವಣಿಗೆ, ಕನ್ನಡ ಬಾವುಟದ ಹಾರಾಟ, ಜೈಕಾರ, ಕರುನಾಡ ಸಂಸ್ಕೃತಿ-ಇತಿಹಾಸ ಸಾರುವ ಹಾಡಿನ ಮೂಲಕ ಕನ್ನಡದ ಸಿರಿವಂತಿಕೆಯ ಸೊಗಡು ಎಲ್ಲೆಲ್ಲೂ ಅನುರಣಿಸುತ್ತಿರುತ್ತದೆ ಎಂದರು.
ತಹಶೀಲ್ದಾರ ಡಿ.ಜಿ ಮಹಾತ್ ಮಾತನಾಡಿ, ಕನ್ನಡಕ್ಕಾಗಿ ನಾವು ಎಂಬ ಅಭಿಯಾನದ ಅಂಗವಾಗಿ ಆಯೋಜಿಸಲಾದ ಗೀತಗಾಯನದಲ್ಲಿ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡುವ ಮೂಲಕ ಹಿಂದೆAದೂ ನಡೆದಿರದ ಅಭೂತಪೂರ್ವ ಕನ್ನಡ ಉತ್ಸವ ಎಂದು ಹೇಳಿದರು.
ತಾಲೂಕಾಡಳಿತದಿಂದ ಆಯೋಜಿಸಲಾದ ಲಕ್ಷ ಕಂಠ ಕನ್ನಡ ಗೀತಗಾಯನವನ್ನು ಸ್ಥಳೀಯ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟೆಗಳ ಪದಾಧಿಕಾರಿಗಳು ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನೇ ಬಳಸುವ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ನಂತರ ಮಾತಾಡ್ ಮಾತನಾಡ್ ಕನ್ನಡ ಎಂಬ ಸ್ವರ್ಧೆಯ ಕಾರ್ಯಕ್ರಮಕ್ಕೆ ತಹಶೀಲ್ದಾರ ಡಿ ಜಿ.ಮಹಾತ್ ಚಾಲನೆ £Ãಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮ£, ಸಿಡಿಪಿಓ ವಾಯ್ ಎಮ್ ಗುಜನಟ್ಟಿ, ಪಿಎಸ್‌ಐ ಎಚ್ ವೈ.ಬಾಲದಂಡಿ, ವೈದ್ಯಾಧಿಕಾರಿ ಭಾರತಿ ಕೋಣಿ, ತಾಪಂ ಸಹಕಾಯಕ £ರ್ದೇಶಕ ಎಸ್.ಎಸ್. ರೋಡನ್ನವರ, ಹೆಸ್ಕಾಂ ಶಾಖಾಧಿಕಾರಿ ಪಿ.ಆರ್.ಯಡಹಳ್ಳಿ, ಪುರಸಭೆ ಸದ್ಯಸರಾದ ಅಬ್ದುಲ್‌ಗಪಾರ ಡಾಂಗೆ, ಆನಂದ ಟಪಾಲದಾರ್, ಪುರಸಭೆ ಆರೋಗ್ಯ £ರೀಕ್ಷಕ ಚಿದಾನಂದ ಮುಗಳಖೋಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತಿದ್ದರು.


Leave a Reply