Koppal

ಜೆ.ಜೆ.ಎಂ ಅಕ್ರಮ ಕಾಮಗಾರಿ ತಡೆಯುವಂತೆ ಸಾಮಾಜಿಕ ಕಾರ್ಯಕರ್ತರಿಂದ ದೂರು


ಕುಷ್ಟಗಿ:ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯತ್ ರಾಜ್ ಇಲಾಖೆ-ತಾಲ್ಲೂಕು ಪಂಚಾಯತ
ಕುಷ್ಟಗಿ ಅವರಿಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ನೇತೃತ್ವದಲ್ಲಿ ದೂರು ನೀಡಿದ ಪದಾಧಿಕಾರಿಗಳು

ಕುಷ್ಟಗಿ:ರಾಜ್ಯ ಸರ್ಕಾರವು ಜಲಜೀವನ್ ಮಿಷನ್ (JJM)
ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೆ 2014 ರ ವೇಳೆಗೆ ಕಾರ್ಯಾತ್ಮಕ ನಳ ಸಂಪರ್ಕ (FHTC) ಕಲ್ಪಿಸುವ ಮೂಲಕ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮಹತ್ತರ ಉದ್ದೇಶದೊಂದಿಗೆ ಜಲಜೀವನ್ ಮಿಷನ್ (JJM) ಯೋಜನೆಯನ್ನು ಜಾರಿಗೆ ತಂದು ಅನುಷ್ಠಾನ ಮಾಡುವವ ನಿಟ್ಟಿನಲ್ಲಿ ಸಾಗುತ್ತಿದೆ ಆದರೆ ಕುಷ್ಟಗಿ ತಾಲ್ಲೂಕಿನಾದ್ಯಂತ ಸ್ಥಳೀಯವಾಗಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರು ಜಲಜೀವನ್ ಮಿಷನ್ (JJM) ಕಾಮಗಾರಿಯನ್ನು ಎಸ್ಟಿಮೆಂಟ್ ನಲ್ಲಿ ಇರುವಂತೆ ಗುಣಮಟ್ಟದ ಪೈಪ್ &ನಲ್ಲಿಗೆ ಅಳವಡಿಸುವ ಪೈಪ್ ಇತರೆ ಸಲಕರಣೆಗಳ ಬಳಕೆ ಮಾಡಿರುವುದಿಲ್ಲ , ಮುಂದುವರಿದು ನಿಯಮ ಬದ್ದವಾಗಿ ಭೂಮಿಯನ್ನು ಅಗೆದು ಪೈಪ್ ಅಳವಡಿಕೆ ಮಾಡಿರುವುದಿಲ್ಲ ಗ್ರಾಮದಲ್ಲಿ ಈ ಮೊದಲು ನಿರ್ಮಾಣದವಾದ ಸಿ.ಸಿ. ರಸ್ತೆ ಅಗೆದು ಮರಳಿ ಪೈಪ್ ಲೈನ್ ಮುಚ್ಚಬೇಕಾದರೆ ಅಗೆದು ಮೇಲೆ ತಗೆದ ಮರಮ್ ಸಂಪೂರ್ಣವಾಗಿ ಸಮ ಮಾಡದೆ ಗುಡ್ಡೆ ಆಕಾರದಲ್ಲಿ ಬಿಟ್ಟು ತೆರಳುತ್ತಿದ್ದಾರೆ ಇದರಿಂದಾಗಿ ಗ್ರಾಮಗಳಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸೊಳ್ಳೆಗಳು ಹೆಚ್ಚಾಗುತ್ತಿವೆ ಈ ಕರೋಣದಂತ ಸಂಕಷ್ಟದ ಸಮಯದಲ್ಲಿ ಗ್ರಾಮದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಅಲ್ಲದೆ ಚಿಕ್ಕ ಮಕ್ಕಳಿಗೆ- ಹಿರಿಯ ನಾಗರಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ,ಇದರಿಂದಾಗಿ ಒಂದು ಕುಟುಂಬದ ಮನೆಗೆ ನೀರು ಬಂದರೆ ಇನ್ನೊಂದು ಕುಟುಂಬದ ಮನೆಯ ನಲ್ಲಿಗೆ ನೀರು ಸರಬರಾಜು ಆಗುವುದಿಲ್ಲ. ಹೀಗಿರುವಾಗ ಈ ಕಾಮಗಾರಿ ಉದ್ದೇಶ ಇಡೆರುವುದಿಲ್ಲ ಈ ಎಲ್ಲಾ ರೀತಿಯ ಅವ್ಯವಸ್ಥೆಯ ಅಕ್ರಮ ಕಾಮಗಾರಿ ಪರಿಶೀಲನೆ ಮಾಡಿ ಕಾನೂನು ರೀತ್ಯ ತನಿಖೆ ಕೈಗೊಳ್ಳಬೇಕು. ಸರ್ಕಾರದ ಹಣದ ದುರುಪಯೋಗ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಆಗುವ ಸಮಸ್ಯೆಗಳನ್ನು ಬಗೆಹರಿಸಬೇಕು . ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಗತಿಗಳನ್ನು ಅವಲೋಕಿಸಿಕೊಂಡು ರಾಜ್ಯ ಮಾಹಿತಿ ಹಕ್ಕು &ಸಾಮಾಜಿಕ ಕಾರ್ಯಕರ್ತ ವೇದಿಕೆಯಿಂದ ಹೋರಾಟ ಮಾಡುವುದು ಅನಿವಾರ್ಯ ಆಗಬಹುದು.
ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಪಂಚಾಯತ್ ರಾಜ್ ಇಲಾಖೆ-ತಾಲ್ಲೂಕು ಪಂಚಾಯತ ಕುಷ್ಟಗಿ ಅವರಿಗೆ ಅಕ್ರಮ ಕಾಮಗಾರಿ ತಡೆದು ಕ್ರಮ ಕೈಗೊಳ್ಳಿ ಎಂದು ರಾಜ್ಯ ಮಾಹಿತಿ ಹಕ್ಕು &ಸಾಮಾಜಿಕ ಕಾರ್ಯಕರ್ತರ (ರಿ)ಯ ಪದಾಧಿಕಾರಿಗಳಾದ ರಾಜ್ಯ ಮಾಧ್ಯಮ ಕಾರ್ಯದರ್ಶಿ ಮರಿಗೌಡ ಬಾದರದಿನ್ನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಶ್ಯಾಡಲಗೇರಿ , ಸದಸ್ಯರಾದ ಧರ್ಮಣ್ಣ ಭಜಂತ್ರಿ , ಮಂಜುನಾಥ ಹಿರೇಹಾಳ ,ಕುಮಾರಗೌಡ ಗೌಡ್ರ ವೇದಿಕೆಯ ಪದಾಧಿಕಾರಿಗಳು ದೂರು ನೀಡಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply