Belagavi

ಮರಾಠಿ ಪುಂಡರಿಗೆ ಖಡಕ್ ಎಚ್ಚರಿಕೆ ನೀಡಿದ ಕನ್ನಡದ ಕುವರ


ಬೆಳಗಾವಿ: ಬೆಳಗಾವಿ ಫೇಸ್ಬುಕ್ ಪೇಜನಲ್ಲಿನ ಸ್ಕ್ರೀನ ಶಾಟ್ ಇಮೇಜ್ ತೆಗೆದುಕೊಂಡು ಕನ್ನಡಿಗರನ್ನೆ ಬಡಿತೇನಿ ಅನ್ನೊ ಪದ ಹಾಕಿದ ಮರಾಠಿ ಪುಂಡರಿಗೆ ಕಡಕ್ ಎಚ್ಚರಿಕೆ ನೀಡಿದ ಕರ್ನಾಟಕ ರಣಧೀರ ಪಡೆ ಜಿಲ್ಲಾಧ್ಯಕ್ಷ ವಿನಾಯಕ ಬ್ಯಾಳೇರಿ.

ಕನ್ನಡದ ರಾಜ್ಯೋತ್ಸವದ ಹಿನ್ನಲೆಯಲ್ಲಿ ಈ ಬಾರಿ ಜಿಲ್ಲಾಧಿಕಾರಿ ಅವರು ಎಂಇಎಸ್ ಗೆ ಕರಾಳ ದಿನಾಚರಣೆಗೆ ಅವಕಾಶ ನೀಡಿರುವುದಿಲ್ಲ ಅದ್ದರಿಂದ ಇವಾಗ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ತರುವಂತ ಪೊಸ್ಟ್ ಮಾಡುತ್ತಿರುವ ನಾಡದ್ರೋಹಿ ಎಂಇಎಸ್ ಪುಂಡರಿಗೆ ಅದೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ತಿರುಗೇಟು ನೀಡಿದ ಕನ್ನಡದ ಕುವರ ವಿನಾಯಕ ಬ್ಯಾಳೇರಿ.

ಬೆಳಗಾವಿ ಪೇಸ್ಬುಕ್ ಪೇಜನ್ ಅಡ್ಮಿನನ ವಿಳಾಸ ಪತ್ತೆಯಾದರೆ ಮನಿಗೆ ಹೋಗಿ ಬಡಿಯುತ್ತೇವೆ ಎಂದು ಪೋಸ್ಟ ಹಾಕಿದ ನಾಡದ್ರೋಹಿ ಎಂಇಎಸ್ ಪುಂಡರಿಗೆ ವಿಡಿಯೋ ಮೂಲಕ ತಕ್ಕ ಉತ್ತರ ನೀಡಿದ್ದು ರಾಜ್ಯದಲ್ಲಿ ಇರುವ ಕನ್ನಡ ಪುಟಗಳಿಗೆ ಏನೇ ತೊಂದರೆ ಆದರೂ ಸದಾಕಾಲ ನಿಮ್ಮ ಜೊತೆಗೆ ಕನ್ನಡಪರ ಹೋರಾಟಗಾರರು ಇದ್ದೇ ಇರುತ್ತೇವೆ ಎಂದು ತಿಳಿಸಿದರು.

ನಾವು ಕನ್ನಡಕ್ಕಾಗಿ ಹೋರಾಡುವಂತವರು ನಮ್ಮ ಕನ್ನಡಿಗನಿಗೆ ಎನಾದರೂ ತೊಂದರೆ ಆದರೆ ನಾವೆಲ್ ಕನ್ನಡಿಗರು ಬೀದಿಗೆ ಇಳಿಯಬೇಕಾಗುತ್ತೆ ಎಂದು ನಾಡದ್ರೋಹಿಗಳಿಗೆ ಎಚ್ಚರಿಕೆ ನೀಡಿದರು.


Leave a Reply