Belagavi

ದೀಪಾವಳಿ(ಬಲಿಪಾಡ್ಯ) ಹಬ್ಬದ ದಿನ ಗೋ ಪೂಜೆ ಕಡ್ಡಾಯ


ಬೆಳಗಾವಿ, ಅ.೨೯ : ಹಿಂದೂ ಧರ್ಮದಲ್ಲಿ ಗೋವು ತಾಯಿಯ ಸ್ಥಾನವನ್ನು ನೀಡಿದ್ದು, ಗೋಮಾತೆ, ದೇವತೆ ಎಂದು ಭಾವಿಸಿ ಪೂಜಿಸಲಾಗುತ್ತದೆ. ಸನಾತನ ಹಿಂದೂ ಧರ್ಮದ ಗೋ ಪೂಜಾ ವಿಧಿ-ವಿಧಾನಗಳನ್ನು ಸಂಪ್ರದಾಯವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ದೀಪಾವಳಿಯ ಹಬ್ಬದ ದಿನದಂದು ಗೋ ಪೂಜೆ ಮಾಡುವುದು ಸುಕ್ತವೂ, ಶಾಸ್ತç ಸಮ್ಮತವೂ ಆಗಿರುತ್ತದೆ.
ಆದ್ದರಿಂದ, ಮುಂಬರುವ ದೀಪಾವಳಿಯ ದಿನದಂದು ರಾಜ್ಯದ ಎಲ್ಲಾ ಅಧಿಸೂಚಿತ ದೇವಾಲಯ/ ಸಂಸ್ಥೆಗಳಲ್ಲಿ ಗೋವುಗಳನ್ನು ಪೂಜಿಸುವ ವಿಚಾರವಾಗಿ ಆ ದಿನ ಗೋವುಗಳಿಗೆ ಸ್ನಾನ ಮಾಡಿಸಿ, ದೇವಾಲಯಕ್ಕೆ ಕರೆತಂದು ಅರಿಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸಿ, ಅಕ್ಕಿ ಬೆಲ್ಲ, ಬಾಳೆಹಣ್ಣು , ಸಿಹಿ ತಿನಿಸು, ಗೋಗ್ರಾಸವನ್ನು ಹಸುವಿಗೆ ನೀಡಿ ಧೂಪ, ದೀಪಗಳಿಂದ ಪೂಜಿಸಿ ನಮಸ್ಕರಿಸುವ ಮೂಲಕ ದೀಪಾವಳಿ ದಿನದಂದು ಸಂಜೆ ೫.೩೦ ರಿಂದ ೬.೩೦ ರ ವರೆಗೆ ಗೋಧಳಿ ಮತ್ತು ಗೋ ಪೂಜೆಯನ್ನು ಮಾಡಬೇಕು.
ಬೆಳಗಾವಿ ಜಿಲ್ಲೆಯ ಎಲ್ಲಾ ಅಧಿಸೂಚಿತ ದೇವಾಲಯ/ ಸಂಸ್ಥೆಗಳಲ್ಲಿ ಮುಂಬರುವ ದೀಪಾವಳಿ/ ಬಲಿಪಾಡ್ಯಮಿ ದಿನದಂದು ಎಲ್ಲಾ ವಿಧಿ-ವಿಧಾನಗಳೊಂದಿಗೆ ನೇರವೇ ರಿಸಬೇಕು ಎಂದು ಜಿಲ್ಲಾಧಿ ಕಾರಿಗಳಾದ ಎಂ.ಜಿ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply