Belagavi

ಲೆಕ್ಕಪರಿಶೋಧನಾ ನಿರ್ದೇಶಕರಿಗೆ ಮಾಹಿತಿ ಕಡ್ಡಾಯ


ಬೆಳಗಾವಿ, ಅ.೨೯ : ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ ರ ಕಲಂ ೬೩(೧) ರಂತೆ ಸನ್ ೨೦೨೧-೨೨ ನೇ ಸಾಲಿನ ಲೆಕ್ಕಪರಿಶೋಧನೆ ಕುರಿತು ಸಹಕಾರ ಸಂಘಗಳ ಲೆಕ್ಕಪರಿಶೋಧನೆಗಾಗಿ ಕರ್ನಾಟಕ ಸಹಕಾರ ಸಂಘಗಳ ನಿಯಮಗಳನ್ನು ಮಾಡಿಕೊಡಲಾಗಿದೆ.
೧೯೬೦ ನಿಯಮ ೨೯-ಬಿ(೮) ರನ್ವಯ ಯಾವುದೇ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು ೨೦೦೪ ನಿಯಮ ೮-ಬಿ(೮) ರನ್ವಯ ಯಾವುದೇ ಸೌಹಾರ್ದ ಸಹಕಾರಿಯ ಮುಖ್ಯ ಕರ‍್ಯನಿರ್ವಾಹಕರು ವಾರ್ಷಿಕ ಮಹಾ ಸಭೆಯಲ್ಲಿ ಲೆಕ್ಕಪರಿಶೋಧಕರ ಅಥವಾ ಲೆಕ್ಕಪರಿಶೋಧನಾ ಫಾರ್ಮ್ನ್ನು ನೇಮಕ ಮಾಡಿಕೊಂಡ ಬಗ್ಗೆ ವಾರ್ಷಿಕ ಮಹಾಸಭೆಯ ಜರುಗಿದ ದಿನಾಂಕದಿAದ ೭ ದಿನಗಳೊಳಗಾಗಿ ಲೆಕ್ಕಪರಿಶೋಧಕರಿಗೆ/ಲೆಕ್ಕಪರಿಶೋಧನಾ ಫಾರ್ಮಿಗೆ ಮತ್ತು ಸಹಕಾರಿ ಲೆಕ್ಕಪರಿಶೋಧನಾ ನಿರ್ದೇಶಕರಿಗೆ ಮಾಹಿತಿ ತಿಳಿಸಬೇಕಾಗಿರುವದು ಕಡ್ಡಾಯವಾಗಿರುತ್ತದೆ.
ಜಿಲ್ಲೆಯ ಬಹುಪಾಲು ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳು ಲೆಕ್ಕಪರಿಶೋಧಕರ/ಲೆಕ್ಕಪರಿಶೋಧನಾ ಫರ್ಮಿನ ನೇಮಕಾತಿ ಬಗ್ಗೆ ಲೆಕ್ಕಪರಿಶೋಧಕರಿಗೆ ಅಥವಾ ಈ ಕಚೇರಿಗೆ ಮಾಹಿತಿ ಸಲ್ಲಿಕೆ ಆಗುತ್ತಿಲ್ಲ. ಆದ್ದರಿಂದ ಈಗಾಗಲೇ ವಾರ್ಷಿಕ ಮಹಾಸಭೆ ಜರುಗಿದ ಸಹಕಾರ ಸಂಘಗಳು / ಸೌಹಾರ್ದ ಸಹಕಾರಿಗಳು ಕೂಡಲೇ ನೇಮಕಾತಿ ಮಾಹಿತಿಯನ್ನು ಸಲ್ಲಿಸುವದು.
ವಾರ್ಷಿಕ ಮಹಾ ಸಭೆಯಲ್ಲಿ ಲೆಕ್ಕಪರಿಶೋಧಕರನ್ನು/ ಲೆಕ್ಕಪರಿಶೋಧನಾ ಫರ್ಮ್ನ್ನು ನೇಮಕಾತಿ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅಧ್ಯಕ್ಷರ ರುಜುವಿನೊಂದಿಗೆ ವಾರ್ಷಿಕ ಮಹಾಸಭೆಯ ನಡವಳಿ ಯಥಾ ನಕÀಲು ಪ್ರತಿಯನ್ನು ಜಂಟಿ ನಿರ್ದೇಶಕರ ಕಛೇರಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಬೆಳಗಾವಿ ಜಿಲ್ಲೆ, ಬೆಳಗಾವಿ ಸುವರ್ಣ ವಿಧಾನ ಸೌಧ ಕೊಠಡಿ ಸಂಖ್ಯೆ ೧೬, ೧೭,೧೭ಎ, ದಕ್ಷಿಣ ಧ್ವಾರ, ಬೆಳಗಾವಿ – ೫೯೦೦೨೦ ದೂರವಾಣಿ ಸಂಖ್ಯೆ; ೦೮೩೧-೨೪೩೨೫೭೯ ಇ-mಚಿiಟ: ಜಜಛಿಚಿ-beಟgಚಿum-ಞಚಿ@ಟಿiಛಿ.iಟಿ ಈ ಕಚೇರಿಗೆ ಸಲ್ಲಿಸಬಹುದು ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply