Belagavi

ತಮಗೆ ಸಹಾಯ ಮಾಡಿದ ಸಂಸ್ಥೆಗೆ ಚಿರಋಣಿಯಾಗಿ : ರಾಘವೇಂದ್ರ ಹವಾಲ್ದಾರ್


ಬೆಳಗಾವಿ: ಎಲ್ಲ ಉದ್ಯಮಿಗಾರರು ತಮ್ಮ ಕುಟುಂಬ ಸಬಲೀಕರಣ ಮಾಡುವ ಮುಖಾಂತರ ದೇಶವನ್ನು ಸಬಲೀಕರಣ ಮಾಡಬೇಕು‌. ತಮಗೆ ಸಹಾಯ ಮಾಡಿದ ಸಂಸ್ಥೆಗೂ ಸಹಿತ ಚಿರಋಣಿಯಾಗಿರಬೇಕು ಎಂದು ಪೋಲಿಸ್ ಇನ್ಸ್ಪೆಕ್ಟರ್ ರಾಘವೇಂದ್ರ ಹವಾಲ್ದಾರ್ ಅವರು ಅಭಿಪ್ರಾಯಪಟ್ಟರು.

ಸಣ್ಣ ಉದ್ಯಮಿದಾರರ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ಸಣ್ಣ ಉದ್ಯಮಿದಾರರಿಗಾಗಿ ಅಕ್ಟೋಬರ್ 29 ರಿಂದ ನವೆಂಬರ್ 2ರವರೆ ಬೆಳಗಾವಿಯಲ್ಲಿ ಏರ್ಪಡಿಸಿರುವ “ಮೆಗಾ ಉದ್ಯಮಿ ಸಂತೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಯಾವ ರೀತಿ ದೇಶದ ಬೆನ್ನೆಲುಬು ಹಾಗೇ ಉದ್ಯಮಿದಾರರು ಕೂಡ ದೇಶದ ಬೆನ್ನೆಲುಬು. ರೈತರಿಗೆ ಒಳ್ಳೆ ಬೆಲೆ ಕೊಡಬೇಕಾದರೆ, ಅವರಿಂದ ವಸ್ತುಗಳನ್ನು ತೆಗೆದುಕೊಂಡು ಒಳ್ಳೆ ಬೆಲೆಯಲ್ಲಿ ಮಾರಾಟ ಮಾಡಿದಾಗ ಮತ್ರ ರೈತರಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯ ಎಂದರು. ಇನ್ನು ಮಡಿಕೆ ಮಾಡುವವರು, ಸೀರೆ ನೇಯುವುದು, ಉಡುಪುಗಳು, ಕರಕುಶಲ ವಸ್ತುಗಳ ಹೀಗೆ ವಿವಿಧ ಬಗೆಯ ವಸ್ತುಗಳನ್ನು ತಯಾರಿಸುವುದು ಈ ಎಲ್ಲಾ ಒಂದಕ್ಕೊಂದು ಲಿಂಕ್ ಇದೆ. ಆದ್ದರಿಂದ ಎಲ್ಲ ಉದ್ಯಮಿದಾರರು ಒಳ್ಳೆಯ ರೀತಿಯಿಂದ ಉದ್ಯಮಿಯನ್ನು ಬೆಳೆಸಿಕೊಂಡು ಹೋಗಬೇಕು ರಾಘವೇಂದ್ರ ಹವಾಲ್ದಾರ್ ಎಂದು ತಿಳಿಸಿದರು.

ಇದೇ ವೇಳೆ ಆಶ್ರಯ ಫೌಂಡೇಷನ್ ಸಂಸ್ಥಾಪಕಿ ನಾಗರತ್ನ ರಾಮಗೌಡ ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ಪ್ರಯತ್ನ ಮಾಡಲು ಮುಂಚೂಣಿಯಾಗಿ ಕೆಲಸ ಮಾಡುತ್ತಿರುವುದು ದೇಶಪಾಂಡೆ ಫೌಂಡೇಶನ್. ಈ ಫೌಂಡೇಷನ್ ನಲ್ಲಿ ವೀರಯ್ಯ ಹಿರೇಮಠ, ಪರಮೇಶ ಗಡದ, ಶೈಲಾ, ಬಾಬು ಪ್ರತಿಯೊಬ್ಬರೂ ಕೂಡ ಪರಿಶ್ರಮದಿಂದ ಗ್ರೌಂಡ್ ಲೆವೆಲ್ ನಲ್ಲಿ ವರ್ಕ್ ಮಾಡ್ತಾಯಿದ್ದಾರು. ಇನ್ನು ಫೌಂಡೇಷನ್ ಉದ್ಯಮಿದಾರರ ಜೊತೆ ವಯಕ್ತಿಕ ಸಂಬಂಧ ಇಟ್ಕೊಂಡು ಅವರಿಗೆ ಸಹಾಯ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನೋರ್ವ ದೇಶಪಾಂಡೆ ಫೌಂಡೇಷನ್ ಪ್ರೊಜೆಕ್ಟ್ ಮ್ಯಾನೇಜರ್ ವೀರಯ್ಯ ಹಿರೇಮಠ ಮಾತನಾಡಿ, ಸಮಾಜದಲ್ಲಿ ಯಾರು ಅಭಿವೃದ್ಧಿಯೊಂದಬೇಕು, ಬೆಳೆಯಬೇಕು ಎನ್ನುತ್ತಿದ್ದಾರೆ‌, ಅವರಿಗೆ ನಿಸ್ವಾರ್ಥದಿಂದ ಕೈಹಿಡಿದು ಬೆಳೆಸುವ ಕೆಲಸ ದೇಶಪಾಂಡೆ ಫೌಂಡೇಷನ್ ಮಾಡುತ್ತಿದೆ. ಈ ಸಂಸ್ಥೆ ಯಾವುದೇ ಲಾಭ, ಅಪೇಕ್ಷ ಇಲ್ಲದೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜಿನೆಸ್ ಅಭಿವೃದ್ಧಿಗಾಗಿ ಕೆಲವು ಉದ್ಯಮಿದಾರರಿಗೆ ದೇಶಪಾಂಡೆ ಫೌಂಡೇಷನ್ ವತಿಯಿಂದ ಗ್ರ್ಯಾಂಡ್ ಅಮೌಂಟ್ ನೀಡಲಾಯಿತು. ಬಳಿಕ ವೇದಿಕೆ ಮೇಲಿದ್ದ ಗಣ್ಯರಿಗೆ ಹಾಗೂ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮ ವೇದಿಕೆಯಲ್ಲಿ ಪರಸ್ಪರ ಕನ್ಸಲ್ಟಿಂಗ್ ಸ್ಥಾಪಕ ಅಮೀತ್ ಕಾಲಕುಂದ್ರಿ, ಪರಮೇಶ ಗಡದ, ಶೈಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Leave a Reply