Belagavi

ಸಿಂದಗಿ ವಿಧಾನಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಜಯಭೇರಿ


ವಿಜಯಪುರ:ನ.೦೨. : ಸಿಂದಗಿ ವಿಧಾನಸಭಾ ಉಪಚುನಾವಣೆಯಲ್ಲಿ ೯೩೮೬೫ ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಶ್ರೀ ರಮೇಶ ಬಾಳಪ್ಪಾ ಭೂಸನೂರ ಅವರು ಈ ಚುನಾವಣೆಯಲ್ಲಿ ಜಯಶಾಲಿಯಾಗಿದ್ದಾರೆ.
ಅದರಂತೆ ಈ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಶ್ರೀ ಅಶೋಕ ಮಲ್ಲಪ್ಪ ಮನಗೂಳಿ ಅವರು ೬೨೬೮೦ ಮತಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಶ್ರೀಮತಿ ನಾಜೀಯಾ ಅಂಗಡಿ ೪೩೫೩ ಮತಗಳನ್ನು ಪಡೆದಿದ್ದಾರೆ. ಅದರಂತೆ ಡಾ. ಸುನೀಲಕುಮಾರ್ ಹೆಬ್ಬಿ ಅವರು ೯೨೫ ಮತಗಳು, ಜಿಲಾನಿ ಗುಡುಸಾಬ ಮುಲ್ಲಾ ೫೧೩ ಮತಗಳು, ದೀಪಿಕಾ. ಎಸ್ ಅವರು ೪೧೫ ಮತಗಳನ್ನು ಪಡೆದುಕೊಂಡು ಚುನಾವಣೆಯಲ್ಲಿ ಸೋಲನ್ನಪ್ಪಿದ್ದಾರೆ.
ಇಂದು ಒಟ್ಟು ೨೨ ಸುತ್ತುಗಳಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ರಮೇಶ ಭೂಸನೂರ ಅವರು ತಮ್ಮ ಸಮೀಪದ ಪ್ರತಿಸ್ಫರ್ಧಿ ಕಾಂಗ್ರೇಸ್ಸಿನ ಅಶೋಕ ಮನಗೂಳಿ ಅವರಿಗಿಂತ ಹೆಚ್ಚಿನ ಮತಗಳ ಅಂತರವನ್ನು ಪ್ರಥಮ ಸುತ್ತಿನಿಂದ ಕೊನೆಯ ಸುತ್ತಿನವರೆಗೆ ಕಾಯ್ದಿರಿಸಿಕೊಂಡು ಜಯಶಾಲಿಯಾಗಿದ್ದಾರೆ.
ಈ ಚುನಾವಣೆಯಲ್ಲಿ ಒಟ್ಟು ೧೦೩೧ ನೋಟಾ ಮತಗಳು ಈ ಪೈಕಿ ೨ ಪೋಸ್ಟಲ್ ಬ್ಯಾಲೆಟ್ ಮತಗಳು ಒಳಗೊಂಡಿವೆ. ಮತ್ತು ೯೩೦ ಪೋಸ್ಟಲ್ ಬ್ಯಾಲೆಟ್ ಮತಗಳು ಹಾಗೂ ೩೮೦ ತಿರಸ್ಕೃತ ಮತಗಳು ಚಲಾವಣೆಯಾಗಿವೆ. ಸೇರಿದಂತೆ ಒಟ್ಟು ೧೩೧೦ ಪೋಸ್ಟಲ್ ಬ್ಯಾಲೆಟ್ ಮತಗಳು ಚಲಾವಣೆಗೊಂಡಿವೆ.
ಈ ಉಪಚುನಾವಣೆಯಲ್ಲಿ ಸ್ಫರ್ಧಿಸಿದ ೬ ಅಭ್ಯರ್ಥಿಗಳಿಗೆ ನೋಟಾ ಮತಗಳು ೧೦೩೧ ಹಾಗೂ ಪುರಸ್ಕೃತ ೧೬೨೭೫೧ ಮತಗಳು ಒಟ್ಟು ಚಲಾವಣೆಯಾಗಿದ್ದು, ೩೮೦ ಮತಗಳು ತಿರಸ್ಕೃತಗೊಂಡಿವೆ. ಇವೆಲ್ಲವೂ ಪೋಸ್ಟಲ್ ಬ್ಯಾಲೆಟ್‌ಗಳಾಗಿವೆ. ಈ ಚುನಾವಣೆಯಲ್ಲಿ ತಿರಸ್ಕೃತ ಮತಗಳು ಒಳಗೊಂಡAತೆ ೧೬೪೧೬೨ ಮತಗಳು ಚಲಾವಣೆಗೊಂಡಿವೆ.
ಈ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳು, ತಿರಸ್ಕೃತ ಮತಗಳು, ನೋಟಾ ಮತಗಳು ಒಳಗೊಂಡAತೆ ಒಟ್ಟು ೧೬೪೧೬೨ ಮತಗಳು ಚಲಾವಣೆಯಾಗಿವೆ ಎಂದು ಚುನಾವಣಾ ವೀಕ್ಷಕರು ಹಾಗೂ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭದ್ರತಾ ಕೊಠಡಿ : ಸಿಂದಗಿ ವಿಧಾನಸಭಾ ಉಪಚುನಾವಣೆಗೆ ಸಂಬAಧಿಸಿದAತೆ ಇಂದು ಬೆಳಿಗ್ಗೆ ಭದ್ರತಾ ಕೊಠಡಿಯನ್ನು ತೆರೆಯಲಾಯಿತು. ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕ ಅನೀಲ ಭಂಡಾರಿ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಆನಂದಕುಮಾರ್, ಸಿಂದಗಿ ಚುನಾವಣಾಧಿಕಾರಿ ರಾಹುಲ್ ಸಿಂಧೆ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply