Belagavi

ಬೆಳಗಾವಿಯಲ್ಲಿ ಬೆಳಕಿನ ಹಬ್ಬದ ಖರೀದಿ ಭರಾಟೆ


ಬೆಳಗಾವಿ: ಕಳೆದ ಎರಡು ವರ್ಷಗಳಲ್ಲಿ ಮಹಾಮಾರಿ ಕೊರೋನಾ ಹಾಗೂ ಲಾಕ್‌ಡೌನ್‌ನಿಂದಾಗಿ ಕಂಗಾಲಾದ ವ್ಯಾಪಾರಸ್ಥರಿಗೆ ಬೆಳಕಿನ ಹಬ್ಬ ದೀಪಾವಳಿ ಕಳೆ ತಂದಿದ್ದು, ಈ ಬೆಳಕಿನ ಹಬ್ಬಕ್ಕೆ ಬೇಕಾದ ಎಲ್ಲ ಸಾಮಾಗ್ರಿಗಳನ್ನು ಜನ ಖರೀದಿಸುತ್ತಿರುವ ದೃಶ್ಯ ಬೆಳಗಾವಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಕಂಡುಬಂತು.

ದೀಪಾವಳಿ ಸೊಬಗು ಎಂಬಂತೆ, ಹಬ್ಬದ ಸಾಮಗ್ರಿಗಳ ಖರೀದಿಯ ಭರಾಟೆಯಲ್ಲಿ ಮಕ್ಕಳು, ಯುವಕ-ಯುವತಿಯರು ನಿರತರಾಗಿದ್ದಾರೆ. ಹೌದು… ಬೆಳಗಾವಿ ನಗರದ ಖಡೇಬಜಾರ್‌, ಶನಿವಾರ ಕೂಟ, ಪಾಂಗುಳ ಗಲ್ಲಿ, ಮಾರುತಿ ಗಲ್ಲಿ, ಸಮಾದೇವ ಗಲ್ಲಿಸೇರಿದಂತೆ ನಗರದ ಬಹುತೇಕ ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ.

ಮನೆಯ ಮುಂಭಾಗದಲ್ಲಿ ಹಾಕಲು ರಂಗೋಲಿ, ಆಕಾಶಬುಟ್ಟಿ, ಪ್ಲಾಸ್ಟಿಕ್‌ ಮಾವಿನ ತೋರಣ, ಮೇಣದ ಬತ್ತಿಗಳು, ಗೃಹ ಉಪಯೋಗಿ ವಸ್ತುಗಳು, ಅಲಂಕಾರಿಕ ವಿದ್ಯುತ್‌ ದೀಪಗಳು, ಪ್ಲಾಸ್ಟಿಕ್‌ ತೋರಣಗಳು, ಹಸಿರು ಪಟಾಕಿಗಳ ಖರೀದಿ ಭರಾಟೆ ಸಾಗಿದೆ.

ಕೊರೋನಾ ಹಾಗೂ ಲಾಕ್ ಡೌನ್ ದಿಂದ ನೊಂದ ವ್ಯಾಪಾರಿಗಳಿಗೆ ಈಗ ಬೆಳಕಿನ ದೀಪಾವಳಿ ಹಬ್ಬದಿಂದ ಉತ್ಸಾಹ ತಂದಿದೆ. ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.ಲಾಕ್ ಡೌನ್ ದಲ್ಲಿ ಬಹಳ ನಷ್ಟವಾಗಿದೆ. ಈ ಹೂವಿನ ವ್ಯಾಪಾರಕ್ಕೆ ಬಹಳ ಹೊಡೆತ ತಂದಿದೆ. ಆದ್ರೆ ಕಳೆದ ವರ್ಷಕ್ಕಿಂತ ಈ ವರ್ಷ ವ್ಯಾಪಾರ ಚನ್ನಾಗಿ ನಡೆಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೂವಿನ ಬೆಲೆ ಏರಿಕೆಯಾಗಿದೆ, ನಮ್ಮಗೆ ನಷ್ಟಯಿದೆ, ಆದರೆ ಲಾಭಯಿಲ್ಲ. ಆದರೂ ಗಿರಾಕಿ ಬಂದ್ರೇ ಮಾತ್ರ ನಮ್ಮ ವ್ಯಾಪಾರ ಆಗುತ್ತೆ ಎಂದು ವ್ಯಾಪರಸ್ಥೆ ಹೇಳಿದ್ದಾರೆ.

ಇನ್ನು… ಹಬ್ಬದ ಖರೀದಿಗಾಗಿ ಆಗಮಿಸಿರುವ ಜನರಿಂದ ಮಾರುಕಟ್ಟೆಯಲ್ಲಿ ಜನದಟ್ಟಣೆ ಆಗುತ್ತಿದ್ದರೆ ಮತ್ತೊಂದೆಡೆ ವಾಹನಗಳ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಅದೇ ರೀತಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಹೊರತು ಕೊರೊನಾ ಸಂಪೂರ್ಣವಾಗಿ ಹೋಗಿಲ್ಲ. ಹಬ್ಬದ ಜೋಶ್‌ನಲ್ಲಿರುವ ಜನರು ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸುವುದು ಅಗತ್ಯ


Leave a Reply