Belagavi

106 ವರ್ಷಗಳ ನಂತರ ಕಸಾಪಗೆ ಅಭ್ಯರ್ಥಿ ಡಾ. ಸರಸ್ವತಿ ಚಿಮ್ಮಲಗಿ


ಬೆಳಗಾವಿ: ಇತಿಹಾಸದಲ್ಲೇ ಮೊದಲ ಬಾರಿಗೆ 106 ವರ್ಷಗಳ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದೇನೆ. ನನ್ನನ್ನು ಗೆಲ್ಲಿಸಿ ಹೊಸ ಚರಿತ್ರೆಗೆ ನಾಂದಿ ಹಾಡಿದ ಕೀರ್ತಿ ನಿಮ್ಮದಾಗಲಿ ಎಂದು ಅಭ್ಯರ್ಥಿ ಹೋರಾಟಗಾರ್ತಿ, ಹಿರಿಯ ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ ಅವರು ಮತದಾರರಿಗೆ ವಿನಂತಿಮಾಡಿಕೊಂಡರು.

ಬುಧವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ 21 ಜನರು ಸ್ಪರ್ಧೆಸಿದ್ದಾರೆ. ಅವರಲ್ಲಿ ಕೆಲವು ಮಾತ್ರ ಸಾಹಿತಿಗಳು ಇದ್ದಾರೆ. ಅವರಲ್ಲಿ ನಾನೇ ಒಬ್ಬಳೇ ನಿಜವಾದ ಸಾಹಿತಿಯಾಗಿದ್ದೇನೆ. ಆದ್ರೆ 106 ವರ್ಷಗಳತನಕ ಪುರುಷರಿಗೆ ಆಯ್ಕೆ ಮಾಡಲಾಗಿದೆ. ಒಟ್ಟು 25 ಪುರುಷರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಒಂದು ಬಾರಿ ಆದ್ರೂ ಮಹಿಳೆಗೆ ಅವಕಾಶ ಕೊಡಬೇಕೆಂದು ಕೇಳಿಕೊಂಡರು. ನಾನು “ದಾನ ಚಿಂತಾಮಣಿ ಅತ್ತಿಮಬ್ಬೆ”, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತ್ಯಿ ಹೀಗೆ ರಾಜ್ಯ, ರಾಷ್ಟ್ರ, ಜಿಲ್ಲಾ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇನೆ. ಅಷ್ಟೇ ಅಲ್ಲದೆ ಕಲಾವಿದೆ, ಹೋರಾಟಗಾರ್ತಿ, ಹಿರಿಯ ಸಾಹಿತಿಯಾಗಿದ್ದೇನೆ. ಆದ್ದರಿಂದ ಜನರು ನನ್ನನ್ನು ಆರಿಸಿತರುತ್ತಾರೆಂದು ಭಾವಿಸುತ್ತೆನೆ ಎಂದರು.

ಇನ್ನು ರಾಜ್ಯದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪರಿಷತ್ತಿನ ಎರಡು ಗೌರವ ಕಾರ್ಯದರ್ಶಿ ಹುದ್ದೆಗಳಲ್ಲಿ ಕಡ್ಡಾಯವಾಗಿ ಒಂದು ಮಹಿಳೆಗೆ ಅವಕಾಶ ಕಲ್ಪಿಸುವುದು. ಸಾಹಿತ್ಯದ ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಸಮಾನ ಆದ್ಯತೆ ನೀಡಲಾಗುವುದು. ಎರಡು ಮಹಿಳಾ ವಿಶೇಷ ಸಮ್ಮೇಳನಗಳಲ್ಲಿ ಒಂದು ವಿಶ್ವ ಮಟ್ಟದಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸುವ ಪ್ರಯತ್ನ ದಲಿತ ಹಾಗೂ ಯುವ ಸಾಹಿತ್ಯ ಸಮ್ಮೇಳನಗಳ ಆಯೋಜನೆ ಮಾಡುವುದು. ಸಮಗ್ರ ಮಹಿಳಾ ಸಾಹಿತ್ಯ ಚರಿತ್ರ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಗಡಿನಾಡು ಸಮ್ಮೇಳನಗಳ ಆಯೋಜನೆ ಮಾಡುವುದು. ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಚಿಂತನೆ ನಡೆಸುವುದು. ಹೀಗೆ ಹತ್ತು ಹಲವು ಕನ್ನಡ ಕಟ್ಟುವ ಕನಸುಗಳವೇ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ರಾಜ್ಯಾಧ್ಯದಂತ ನನಗೆ ಬೆಂಬಲ ಸುಚಿಸುತ್ತಿರುವುದು ಕಂಡು ಬರುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚುಟುಕು ಸಾಹಿತಿ ಪರಿಷತ್ತ ಬೆಳಗಾವಿ ಜಿಲ್ಲಾಧ್ಯಕ್ಷ ಅಶೋಕ ಮಳಲಗಿ, ಜಿಲ್ಲಾ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ, ಹಿರಿಯ ಸಾಹಿತಿ ಜ್ಯೋತಿ ಬದಾಮಿ ಉಪಸ್ಥಿತರಿದ್ದರು.


Leave a Reply