Belagavi

ಭಾಷಾ ಪ್ರೇಮ, ಅಭಿಮಾನ ನಿರಂತರವಾಗಿರಲಿ : ಡಾ ಜೆ. ಕೆ. ಕಿತ್ತೂರ


ಬೆಳಗಾವಿ ೩- ಕನ್ನಡ ಉಳಿಸುವಲ್ಲಿ ಬೆಳೆಸುವಲ್ಲಿ ವಿದ್ಯಾರ್ಥಿಗಳಾದ ನಿಮ್ಮ ಪಾತ್ರ ದೊಡ್ಡದು. ಸಾಹಿತ್ಯಿಕ ಪುಸ್ತಕಗಳನ್ನು ಕೊಂಡು ಓದುವದು ಒಳ್ಳೆಯದು. ಒಂದು ವೇಳೆ ಕೊಂಡುಕೊಳ್ಳಲು ಅಸಮರ್ಥರಾಗಿದ್ದಲ್ಲಿ ನಮ್ಮ ಕಾಲೇಜ ವಾಚನಾಲಯದಲ್ಲಿಯೇ ಕನ್ನಡ ಸಾಹಿತ್ಯಕ್ಕೆ ಸಂಬAಧಿಸಿದ ಪುಸ್ತಕಗಳು ಹೇರಳವಾಗಿವೆ. ಇಲ್ಲಿಯ ಪುಸ್ತಕಗಳನ್ನು ಓದಿ. ಕನ್ನಡ ಸಾಹಿತ್ಯವನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಎಂದು ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜೆ. ಕೆ. ಕಿತ್ತೂರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇಂದಿಲ್ಲಿ ಹೇಳಿದರು.
ಉದ್ಯಮಬಾಗದಲ್ಲಿರುವ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿ.ಐ.ಟಿ.) ಕನ್ನಡ ಬಳಗದವರು ನವೆಂಬರ ೧ ರಂದು ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಾಚಾರ್ಯ ಡಾ. ಜೆ. ಕೆ. ಕಿತ್ತೂರು ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದೆ ಮಾತನಾಡುತ್ತ ಡಾ. ಕಿತ್ತೂರ ಅವರು ನಿಮ್ಮ ಕನ್ನಡ ಪ್ರೇಮ ಕೇವಲ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿರಲಿ ಎಂದು ಹೇಳಿದರು.
ಜಿ.ಐ.ಟಿ. ಕನ್ನಡ ಬಳಗದ ಸಂಯೋಜಕರಾದ ಪ್ರೊ. ಎಸ್. ಜಿ. ಕುಲಕರ್ಣಿಯವರು ಮಾತನಾಡಿ ಮೊದಲು ಮಾತೃಭಾಷಯಾದ ಕನ್ನಡವನ್ನು ಗೌರವಿಸಬೇಕು. ನಮ್ಮ ಸಾಹಿತ್ಯ ಸಮೃದ್ಧವಾಗಿದೆ ವಚನಸಾಹಿತ್ಯ, ದಾಸಸಾಹಿತ್ಯ ಹೀಗೆ ಹಲವಾರು ವಿಷಯಗಳ ವಾಚನದ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಮಹಾವಿದ್ಯಾಲಯ ಸಿಬ್ಬಂಧಿ ವರ್ಗ, ವಿದ್ಯಾರ್ಥಿ ಕಾರ್ಯದರ್ಶಿ ಹೇಮಂತ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Leave a Reply