Belagavi

ನಾಡ ಧ್ವಜ ಹರಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಕರವೇ ಸ್ವಾಭಿಮಾನಿ ಬಣದ ಆಗ್ರಹ


ಬೆಳಗಾವಿ: ಜಿಲ್ಲೆಯ ದೇಸೂರು ಗ್ರಾಮದಲ್ಲಿ ನಾಡ ಬಾವುಟವನ್ನು ಹರಿದು ಕೃತ್ಯ ಮೆರೆದಿರುವ ದುಷ್ಕರ್ಮಿಗಳನ್ನು ಬಂಧಿಸಬೇಕು ಮತ್ತು ಅಲ್ಲಿ ಶಾಶ್ವತವಾಗಿ ಬಾವುಟ ಹಾರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ಇಂದು ನಗರದ ಚನ್ನಮ ವೃತ್ತದಿಂದ ಪ್ರತಿಭಟನೆ ನಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ರಾಜ್ಯೋತ್ಸವ ಆದ ಎರಡನೇ ದಿನಕ್ಕೆ ಕೆಲವು ದುಷ್ಕರ್ಮಿಗಳು ದೇಸೂರಿನಲ್ಲಿ ಹಾರಿಸಲಾಗಿದ್ದ ಬಾವುಟವನ್ನು ಹರಿದು ಹಾಕಿ ನಾಡದ್ರೋಹಿ ಕೃತ್ಯವನ್ನು ಎಸುಗಿದ್ದಾರೆ ಇದರಿಂದ ಕನ್ನಡಿಗರ ಭಾವನೆಗೆ ದಕ್ಕೆಯಾಗಿದ್ದು ಕೋಡಲೆ ನಾಡದ್ರೋಹಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಆಗ್ರಹಿಸಿದರು.

ಇಂತಹ ಘಟನೆಗಳು ಗಡಿಬಾಗದಲ್ಲಿ ನಡೆಯುವುದರಿಂದ ಕೋಮುಗಲಭೆಗಳಷ್ಟೆ ಅಲ್ಲದೆ ಭಾಷಾ ವೈಶಮ್ಯಕ್ಕೂ ಎಡೆ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ನಾಡದ್ರೋಹಿ ಚಟುವಟಿಕೆ ಮತ್ತು ಹೇಳಿಕೆ ಕೊಡುವವರ ಮೇಲೆ ಕಠಿಣ ಕ್ರಮ ಜರುಗಿಸಿ ಹಾಗೂ ದೇಸೂರಿನಲ್ಲಿ ಶಾಶ್ವತವಾಗಿ ಬಾವುಟವನ್ನು ಹಾರಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಮತ್ತು ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು


Leave a Reply