Belagavi

ನೀರು ಪಾಲಾದ ಅಕ್ಕ ತಂಗಿಯರು: ಬೆಳಗಾವಿಯಲ್ಲಿ ದಾರುಣ ಘಟನೆ


ಬೆಳಗಾವಿ: ಚಿಕ್ಕಮಕ್ಕಳು ದುರಂತ ಸಾವಿಗೆ ಈಡಾಗುತ್ತಿರುವ ಪ್ರಕರಗಳು ಹೆಚ್ಚಾಗುತ್ತಿದ್ದು, ಇಂದು ಸಹೋದರಿಯರಿಬ್ಬರು ಕರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.ಸಾಂಬ್ರಾ ನಿವಾಸಿಗಳಾದ ನೇತ್ರಾ ಈರಣ್ಣ ಕೊಳವಿ (8) ಹಾಗೂ ಪ್ರಿಯಾ ಈರಣ್ಣ ಕೊಳವಿ (6) ಸಾವಿಗೀಡಾದ ಬಾಲಕಿಯರು.ದುರಂತವೆಂದರೆ ಹತ್ತು ವರ್ಷದ ಅಕ್ಕನ ಕಣ್ಣೆದುರೇ ಈ ಬಾಲಕಿಯರು ನೀರುಪಾಲಾಗಿದ್ದಾರೆ.

ಹಿರಿಯ ಸಹೋದರಿ ಸಂಧ್ಯಾ (10) ಜತೆ ನೇತ್ರಾ ಹಾಗೂ ಪ್ರಿಯಾ ದೀಪಾವಳಿ ಹಬ್ಬದ ಪೂಜಾ ಸಾಮಗ್ರಿಗಳನ್ನು ವಿಸರ್ಜಿಸಲು ಇಲ್ಲಿನ ಬಾಳೆಗಿಡ ಕೆರೆಗೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ.ಅಕ್ಕ ನೋಡ ನೋಡುತ್ತಿದ್ದಂತೆ ನೀರುಪಾಲಾದ ಸೋದರಿಯರನ್ನು ಸ್ಥಳೀಯರು ತಕ್ಷಣ ಧಾವಿಸಿ ರಕ್ಷಣೆಗೆ ಯತ್ನಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಸ್ಥಳೀಯರ ಸಹಾಯದಿಂದ ಬಾಲಕಿಯರ ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು, ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Reply