vijayapur

ಲೋಕಾಯುಕ್ತ ಇಲಾಖೆ ಕಾರ್ಯಗಳು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಿ: -ರಾಜ್ಯ ಉಪಲೋಕಾಯುಕ್ತ ಬಿ.ಎಸ್ ಪಾಟೀಲ


ವಿಜಯಪುರ:ನ.೦೮.: ಲೋಕಾಯುಕ್ತ ಇಲಾಖೆ ವ್ಯಾಪ್ತಿಯ ಪ್ರತಿ ಕೆಲಸ, ಕಾರ್ಯವು ಅತ್ಯಂತ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವುದು ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ರಾಜ್ಯ ಉಪಲೋಕಾಯುಕ್ತರಾದ ಶ್ರೀ ಬಿ.ಎಸ್ ಪಾಟೀಲ ಅವರು ಹೇಳಿದರು.
ನಗರದ ಲೋಕಾಯುಕ್ತ ಕಚೇರಿಯಲ್ಲಿಂದು ಜಿಲ್ಲೆಯ ಲೋಕಾಯುಕ್ತ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ವಿಜಯಪುರ, ಮುದ್ದೇಬಿಹಾಳ ಹಾಗೂ ಬ.ಬಾಗೇವಾಡಿ ತಾಲೂಕಿನ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಲೋಕಾಯುಕ್ತ ಇಲಾಖೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷತನದಂತಹ ವರ್ತನೆಯನ್ನು ಸಹಿಸಲಾಗುವುದಿಲ್ಲ. ಒಂದು ವೇಳೆ ಯಾವುದಾದರೂ ಕೆಲಸದಲ್ಲಿ ಲೋಪದೋಷ ಕಂಡುಬAದರೆ ಅದಕ್ಕೆ ಸಂಬAಧಪಟ್ಟ ಅಧಿಕಾರಿಗಳನ್ನೇ ಗುರಿಮಾಡಲಾಗುವುದು ಎಂದು ಅವರು ಹೇಳಿದರು.
ಆದ್ದರಿಂದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಬೇಕು. ಇಲಾಖೆಯ ಘನತೆ, ಗೌರವ ಹೆಚ್ಚಿಸಬೇಕು. ಇಲಾಖೆಗೆ ಸಲ್ಲಿಕೆಯಾಗುವ ಕೆಲವೇ ಕೆಲವು ಅರ್ಜಿಗಳನ್ನು ಹೊರತುಪಡಿಸಿದರೆ, ಬಹುತೇಕ ಅರ್ಜಿಗಳು ವಿಶ್ವಾಸಾರ್ಹವಾಗಿರುತ್ತವೆ. ಯಾವುದೇ ಕಾರಣಕ್ಕೂ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡಬಾರದು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದರಂತೆ ತಾಲೂಕಾವಾರು ಅಧಿಕಾರಿಗಳ ಸಭೆ ನಡೆಸುತ್ತಿರುವುದರಿಂದ ಆಡಳಿತದಲ್ಲಿ ಇನ್ನಷ್ಟು ಚುರುಕುತನ ತರಲು ಸಾಧ್ಯವಾಗುತ್ತಿದ್ದು, ಇದರಿಂದ ತಳಮಟ್ಟದಲ್ಲೂ ತಂಡದ ರೂಪದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಮೂಲಕ ಪರಿಣಾಮಕಾರಿ ಆಡಳಿತ ನೀಡಲು ಸಾಧ್ಯ ಎಂದರು.
ಇಲಾಖೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇಂತಹ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಈ ಪೈಕಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಯಲು ಶೌಚಾಲಯದಂತಹ ಸಮಸ್ಯೆ ಬಹಳ ಗಂಭೀರ ಸ್ವರೂಪದಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಇನ್ನಷ್ಟು ಪರಿಣಾಮಕಾರಿಯಾಗಿ, ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಹಾಗೆಯೇ ಜನರಲ್ಲಿ ಇದರ ಬಗ್ಗೆ ಇನ್ನಷ್ಟು ಅರಿವು ಮೂಡಿಸಬೇಕು ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅದರಲ್ಲೂ ಗ್ರಾಮಗಳ ಜನರಲ್ಲಿ ಬಯಲು ಶೌಚಾಲಯದಿಂದಾಗುವ ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡುವುದರ ಜೊತೆಗೆ ಕಾನೂನು ಕ್ರಮಗಳ ಬಗ್ಗೆಯೂ ತಿಳಿಹೇಳಬೇಕು. ಇದರ ಸಾಧಕ, ಬಾಧಕಗಳ ಬಗ್ಗೆ ಅವರಿಗೆ ವಿವರಿಸಬೇಕು. ಇದೊಂದು ಹೆಣ್ಣುಮಕ್ಕಳ ಸ್ವಾಭಿಮಾನದ ಹಾಗೂ ಹಕ್ಕಿನ ಪ್ರಶ್ನೆಯಾಗಿದೆ. ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ಅಧಿಕಾರಿಗಳೂ ಕೂಡ ಯುದ್ಧೋಪಾದಿಯಲ್ಲಿ ಕ್ರಮಕೈಗೊಳ್ಳಬೇಕು. ಏಕೆಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದಕ್ಕಾಗಿ ಅಪಾರ ಪ್ರಮಾಣ ಅನುದಾನ ಬಿಡುಗಡೆ ಮಾಡುತ್ತವೆ. ಅದರ ಸದ್ಭಳಕೆಯಾಗಬೇಕು. ವೈಯಕ್ತಿಕ ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ಸುವ್ಯವಸ್ಥಿತವಾಗಿ ನಿರ್ಮಿಸಬೇಕು. ಈ ವಿಷಯದಲ್ಲಿ ಜನರಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ, ಅವರಿಗೆ ಸರಿಯಾಗಿ ತಿಳಿಹೇಳಬೇಕು. ಅವರ ಅಸಹಾಯಕತೆಯನ್ನೂ ಆಲಿಸಬೇಕು. ಅದಕ್ಕೆ ಸೂಕ್ತ ಪರಿಹಾರಕಂಡುಕೊಳ್ಳಬೇಕು ಎಂದು ಅವರು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ನೌಕರರು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಜವಾಬ್ದಾರಿಯುತ ನಾಗರೀಕರು ಈ ವಿಷಯದಲ್ಲಿ ಇನ್ನಷ್ಟು ಜಾಗೃತರಾಗಬೇಕು. ಇದೆಲ್ಲವೂ ಲೋಕಾಯುಕ್ತರ ಗಮನಕ್ಕೂ ಬಂದಿದೆ ಎಂದು ಅವರಿಗೆ ಎಚ್ಚರಿಕೆ ನೀಡಬೇಕು. ಪಂಚಾಯತಿ ಸದಸ್ಯರು, ಪಿಡಿಒ ಗಳು ಕ್ರಾಂತಿಕಾರಕ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾವು ಭೇಟಿ ನೀಡಿದ ಕೆಲವು ಗ್ರಾಮಗಳಲ್ಲಿ ಶಾಲೆಗಳ ಹತ್ತಿರದಲ್ಲೇ ಬಯಲು ಶೌಚಾಲಯದಂತಹ ಸಮಸ್ಯೆ ಕಂಡುಬAದಿದ್ದು, ಇದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆದ್ದರಿಂದ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ, ಸೂಕ್ತ ಕ್ರಮಕೈಗೊಳ್ಳುವುದರ ಜೊತೆಗೆ ಶಾಲೆಗಳ ಸುತ್ತಮುತ್ತ ಸ್ವಚ್ಛತೆ ಇರುವಂತೆ ನೋಡಿಕೊಳ್ಳಬೇಕು ಎಂದು ಸಂಬAಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಇಂತಹದೊAದು ಕಾರ್ಯನಿರ್ವಹಿಸುವಾಗ ಅಧಿಕಾರಿಗಳು ಜನರೊಂದಿಗೆ ಸ್ನೇಹಿತ, ಶಿಕ್ಷಕ ಹಾಗೂ ಕೆಲವೊಮ್ಮೆ ಪೊಲೀಸ್ ರೀತಿಯಲ್ಲಿಯೂ ವರ್ತಿಸಬೇಕು. ತಾವು ಬೇರೆ ಕಡೆಗಳಿಗೆ ಹೋದಾಗ ಇಲ್ಲಿನ ಕೆಲಸ ಕಾರ್ಯಗಳನ್ನು, ಅಧಿಕಾರಿಗಳನ್ನು ಉದಾಹರಣೆ ನೀಡುವಂತೆ ಕಾರ್ಯ ಮಾಡಬೇಕು. ಹಿರಿಯ ಅಧಿಕಾರಿಗಳು ಗುರಿ ನಿಗದಿಪಡಿಸಿಕೊಂಡು ಕಾರ್ಯೋನ್ಮುಖರಾಗುವುದರೊಂದಿಗೆ ತಮ್ಮ ಅಧೀನ ಅಧಿಕಾರಿಗಳಿಗೂ ಗುರಿನಿಗದಿಪಡಿಸಿ ಅದನ್ನು ಸಾಧಿಸುವಂತೆ ನೋಡಿಕೊಳ್ಳಬೇಕು. ಅಗತ್ಯಬಿದ್ದರೆ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳ ಮಾರ್ಗದರ್ಶನ, ಸಲಹೆ ಪಡೆಯಬೇಕು ಎಂದು ಅವರು ಹೇಳಿದರು.
ಹುಲಗಂಚಿ ಹಾಗೂ ಕೊನ್ನೂರ, ನಲತವಾಡ ತಂಗಡಗಿ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇದರಿಂದ ಅಕ್ಕಪಕ್ಕದ ಗ್ರಾಮಗಳಿಗೂ ಬಹಳ ಅನುಕೂಲವಾಗುತ್ತದೆ. ಅದರಂತೆ ಬ್ಯಾಕೋಡದಿಂದ ಕೊನ್ನೂರು, ತಲುಪುವ ರಸ್ತೆಯ ಬಗ್ಗೆಯೂ ಅಲ್ಲಿನ ಸಾರ್ವಜನಿಕರಿಂದ ಅರ್ಜಿ, ಅಹವಾಲು ಬಂದಿದ್ದು, ಅದನ್ನು ಶೀಘ್ರವೇ ಸರಿಪಡಿಸಿ, ಇದರಿಂದ ಅಲ್ಲಿನ ರೈತರಿಗೆ ಬಹಳ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಅದರಂತೆ ಕೃಷ್ಣಾ ನದಿ ಹಾಗೂ ಕೆರೆಗಳ ನೀರನ್ನು ಸಮರ್ಪಕವಾಗಿ ಬಳಸುವುದರ ಜೊತೆಗೆ ರೈತರಿಗೆ ನೀರಿನ ಹಾಗೂ ವಿದ್ಯುತ್ ಸದ್ಭಳಕೆಯ ಬಗ್ಗೆ ಅರಿವು ಮೂಡಿಸಬೇಕು. ಬರದ ಜಿಲ್ಲೆ ಎಂಬ ಹಣೆಪಟ್ಟಿ ಕಳಚಲು ಕಾಲಬಂದಿದ್ದು, ಇದಕ್ಕಾಗಿ ಅಧಿಕಾರಿಗಳು ಬದ್ಧರಾಗಿ ಕಾರ್ಯನಿರ್ವಹಿಸಬೇಕು. ನೀರು ಸಂಗ್ರಹಿಸಿಟ್ಟರೆ ಸಕಾಲದಲ್ಲಿ ಜನ, ಜಾನುವಾರುಗಳಿಗೂ ಬಹಳ ಅನುಕೂಲವಾಗುತ್ತದೆ. ಈ ಬಗ್ಗೆ ವರದಿಯನ್ನೂ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದೇ ರೀತಿ ಜನರಿಗೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಜನರು ಲೋಕಾಯುಕ್ತದವರೆಗೆ ಹೋಗದಂತೆ ನೋಡಿಕೊಂಡು, ಜನರ ಸಮಸ್ಯೆಗಳನ್ನು ಬೇಗನೇ ಪರಿಹರಿಸಿ, ಜನರ ಪ್ರಶಂಸೆಗೆ ಪಾತ್ರರಾಗಬೇಕು. ಜಿಲ್ಲೆಯಲ್ಲಿ ಸ್ವಚ್ಛತೆ, ರಸ್ತೆ, ಶೌಚಾಲಯದಂತಹ ಸಮಸ್ಯೆಗಳನ್ನು ಪರಿಹರಿಸಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಬದ್ಧರಾಗಿ, ಕಾರ್ಯನಿರ್ವಹಿಸಿ ಎಂದು ಅವರು ಹೇಳಿದರು.
ಇದೇ ವೇಳೆ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಗಳ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಜೊತೆಗೆ ಜನರಲ್ಲಿ ಸೂಕ್ತ ಅರಿವು ಮೂಡಿಸುವುದರೊಂದಿಗೆ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅದರಂತೆ ಕೋವಿಡ್ ಲಸಿಕೆ ನೀಡುವಲ್ಲಿ ರಾಜ್ಯದಲ್ಲಿ ನಮ್ಮ ವಿಜಯಪುರ ಜಿಲ್ಲೆಯು ಮೂರನೇ ಸ್ಥಾನದಲ್ಲಿದೆ. ಮೂರನೇ ಅಲೆ ನಿಯಂತ್ರಣಕ್ಕಾಗಿಯೂ ಸಕಲ ಮಾಡಿಕೊಳ್ಳಲಾಗಿದೆ ಎಂದು ಅವರು ಸಭೆಯ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ ಶ್ರೀಮತಿ ಅನಿತಾ.ಬಿ.ಹದ್ದಣ್ಣವರ್, ಡಿವೈಎಸ್ಪಿಗಳಾದ ಬಸವರಾಜ ಯಲಿಗಾರ, ಅರುಣ ಬಿ. ನಾಯಕ್, ಇನ್ಸ್ಪೆಕ್ಟರ್‌ಗಳಾದ ಆನಂದ ಟಕ್ಕಣ್ಣವರ್, ಗುರುನಾಥ ಚವ್ಹಾಣ, ವಿದ್ಯುತ್ ಹಾಗೂ ಶಿಕ್ಷಣ, ಆರೋಗ್ಯ ಇಲಾಖೆ ಅಧಿಕಾ


Leave a Reply