vijayapur

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ೧೨ನೆಯ ಘಟಿಕೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮೂವ್ವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾ£


ವಿಜಯಪುರ:ನ.: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ೧೨ನೆಯ ಘಟಿಕೋತ್ಸವವು ಇದೇ ನವೆಂಬರ್ ೯ರಂದು ಮಂಗಳವಾರ ಬೆಳಿಗ್ಗೆ ೯.೦೦ ಗಂಟೆಯಿAದ ಮಧ್ಯಾಹ್ನ ೧.೩೦ ಗಂಟೆಯವರೆಗೆ ಜ್ಞಾನಶಕ್ತಿ ಆವರಣದ ಕ್ರೀಡಾ ಮೈದಾನದಲ್ಲಿ ವಿಶೇಷವಾಗಿ ನಿರ್ಮಿಸಿರುವ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಲಪತಿ ತುಳಸಿಮಾಲಾ ಅವರು ಹೇಳಿದರು
ಮಹಿಳಾ ವಿಶ್ವವಿದ್ಯಾನಿಲಯದ ೧೨ನೆಯ ಘಟಿಕೋತ್ಸವ ಕಾರ್ಯಕ್ರಮದ ಹಿನ್ನೆಲೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಘಟಿಕೋತ್ಸವದ ಅಧ್ಯಕ್ಷತೆಯನ್ನು ಸನ್ಮಾನ್ಯ ರಾಜ್ಯಪಾಲರು ಮತ್ತು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಶ್ರೀ.ಥಾವರಚಂದ್ ಗೆಹ್ಲೋಟ್ ಅವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಇನ್‌ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾ ಮೂರ್ತಿ ಅವರು ಆನ್‌ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಉಪಸ್ಥಿತರಿರುವರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರು ಮಹನೀಯರಿಗೆ ಈ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು. ಶ್ರೀಮತಿ ವೈದೇಹಿ ಕಾವ್ಯನಾಮದಿಂದ ಖ್ಯಾತರಾಗಿರುವ ‘ಜಾನಕಿ ಶ್ರೀನಿವಾಸಮೂರ್ತಿ (ಸಾಹಿತ್ಯ), ಡಾ.ಸುಮಾ ಸುಧೀಂದ್ರ (ಸಂಗೀತ) ಮತ್ತು ಕಲ್ಪನಾ ಸರೋಜ್ (ಉದ್ಯಮಶೀಲತೆ-ಮಹಿಳಾ ಸಬಲೀಕರಣ) ಅವರಿಗೆ ಸನ್ಮಾನ್ಯ ರಾಜ್ಯಪಾಲರು ಮತ್ತು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಶ್ರೀ.ಥಾವರಚಂದ್ ಗೆಹ್ಲೋಟ್ ಅವರು ಈ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುವರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು ೭೬ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಈ ಘಟಿಕೋತ್ಸವದಲ್ಲಿ ವಿತರಿಸಲಾಗುವುದು.
ಈ ಘಟಿಕೋತ್ಸವದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೋಮಾ ಸೇರಿ ಒಟ್ಟು ೧೧,೨೦೮ ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಈ ಘಟಿಕೋತ್ಸವದಲ್ಲಿ ಒಟ್ಟು ೪೮ ವಿದ್ಯಾರ್ಥಿನಿಯರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು.
ಈ ಘಟಿಕೋತ್ಸವದಲ್ಲಿ ಒಟ್ಟು ೯೯೬ ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಗುವುದು. ಎಂ.ಎ.- ೪೧೭, ಎಂ.ಕಾA.- ೨೩೫, ಎಂ.ಬಿ.ಎ.- ೫೨, ಎಂ.ಎಸ್.ಸಿ.- ೧೩, ಎಂ.ಈಡಿ- ೭, ಎಂ.ಪಿ.ಈಡಿ- ೧೧, ಎಂ.ಎಲ್.ಆಯ್.ಎಸ್‌ಸಿ.- ೧೨, ಎಂ.ಎಸ್.ಡಬ್ಲೂö್ಯ- ೩೮, ಎಂ.ಎಫ್.ಎA – ೧೧ ಮತ್ತು ಎಂ.ಸಿ.ಎ.- ೨೦೦ ವಿದ್ಯಾರ್ಥಿನಿಯರು ಪದವಿಗೆ ಅರ್ಹರಾಗಿದ್ದಾರೆ.
ಪಿ.ಜಿ.ಡಿಪ್ಲೋಮಾ ಕೋರ್ಸುಗಳಾದ ಯೋಗ ಅಧ್ಯಯನದಲ್ಲಿ ೨೫, ಮ್ಯೂಜಿಕ್–೩, ಡಿ.ಎಫ್.ಎಂ.ನಲ್ಲಿ ೧೮, ಪಿ.ಜಿ.ಡಿಪ್ಲೋಮಾ ಫ್ಯಾಷನ್ – ೪೩ ಹೀಗೆ ಒಟ್ಟು ೮೯ ವಿದ್ಯಾರ್ಥಿನಿಯರು ಡಿಪ್ಲೋಮಾ ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ.
ಒಟ್ಟು ೧೦,೧೨೩ ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲಿದ್ದು ಈ ಪೈಕಿ ಬಿ.ಎ. – ೩೪೯೪, ಬಿ.ಎಸ್.ಡಬ್ಲೂö್ಯ – ೩೪, ಬಿ.ಈಡಿ -೧೫೭೫, ಬಿ.ಪಿ.ಈಡಿ – ೦೯, ಬಿ.ಕಾಂ – ೩೩೨೯, ಬಿಬಿಎ – ೧೪೮, ಬಿ.ಎಸ್.ಸಿ- ೧೩೭೩, ಬಿ.ಎಫ್,ಎಡಿ – ೮, ಬಿ.ಸಿ.ಎ- ೯೬ ಮತ್ತು ಬಿ.ಎಫ್.ಟಿ- ೫೭ ವಿದ್ಯಾರ್ಥಿನಿಯರು ಸ್ನಾತಕ ಪದವಿ ಪಡೆಯಲು ಅರ್ಹರಾಗಿರುತ್ತಾರೆ.
ವಿಶ್ವವಿದ್ಯಾನಿಲಯದ ೧೨ನೆಯ ಘಟಿಕೋತ್ಸವವನ್ನು ಯಶಸ್ವಿಯಾಗಿ ಸಂಘಟಿಸಲು ಈಗಾಗಲೇ ಹಲವಾರು ಸಮಿತಿಗಳನ್ನು ರಚಿಸಲಾಗಿದ್ದು, ಭರದಿಂದ ಸಿದ್ಧತೆಗಳು ನಡೆದಿವೆ.
ಈ ಬಾರಿಯ ಘಟಿಕೋತ್ಸವದಲ್ಲಿ ಕೇವಲ ಚಿನ್ನದ ಪದಕ ಪಡೆದಿರುವ ವಿದ್ಯಾರ್ಥಿನಿಯರು ಹಾಗೂ ಪಿಎಚ್‌ಡಿ ಪದವೀಧರರು ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಉಳಿದವರಿಗೆ ಆನ್‌ಲೈನ್ ಮೂಲಕವೇ ಘಟಿಕೋತ್ಸವ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಘಟಿಕೋತ್ಸವವನ್ನು ಅಕ್ಕ ಟಿವಿ ಯುಟ್ಯೂಬ್ ನ್ಯೂಸ್ ಚಾನೆಲ್ ಲಿಂಕ್ (hಣಣಠಿs://ಥಿouಣu.be/೬೮೧ಕಿSಞ೫uಟಿ೫ತಿ) ಮೂಲಕ ವೀಕ್ಷಿಸಬಹುದಾಗಿದೆ. ಅಲ್ಲದೇ ಕೆಎಸ್‌ಡಬ್ಲುö್ಯಯು ಮೀಡಿಯಾ ಸೆಲ್ ಫೇಸ್‌ಬುಕ್ ಲೈವ್ (hಣಣಠಿs://ತಿತಿತಿ.ಜಿಚಿಛಿebooಞ.ಛಿom/ಏSWU-ಒeಜiಚಿ-ಅeಟಟ-೧೬೩೦೭೨೨೫೮೭೧೫೬೧೭೧) ಮೂಲಕವೂ ವೀಕ್ಷಿಸಬಹುದಾಗಿದೆ.
ಆಹ್ವಾನಿತರು/ವಿದ್ಯಾರ್ಥಿನಿಯರು ಆವರಣ ಪ್ರವೇಶ ಮಾಡುವ ಮೊದಲು ಥರ್ಮಲ್ ಸ್ಕಾö್ಯನಿಂಗ್‌ಗೆ ಒಳಪಡಿಸಿಕೊಳ್ಳಬೇಕು. ಅಲ್ಲದೇ ಸಭೆ ಮುಗಿಯವವರೆಗೆ ಮಾಸ್ಕ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು.
ಘಟಿಕೋತ್ಸವದ ದಿನ ಇಡೀ ಆಡಳಿತ ಭವನ, ಮುಖ್ಯ ವೇದಿಕೆ ಹಾಗೂ ಉಪ ವೇದಿಕೆಗಳನ್ನು ಡಿಸ್‌ಇನ್ಪೆಕ್ಷನ್ ಮಾಡಿ ಶುಚಿಗೊಳಿಸಲಾಗುವುದು. ಅಲ್ಲದೇ ಸೆನಿಟೈಸರ್ ವ್ಯವಸ್ಥೆ ಕೂಡಾ ಮಾಡಲಾಗುವುದು. ಇದಕ್ಕಾಗಿ ನಮ್ಮ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಘಟಿಕೋತ್ಸವದಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಆರೋಗ್ಯ ಕಾಳಜಿಗಾಗಿ ಅಗತ್ಯ ಕ್ರಮಗಳನ್ನು ಕೈಕೊಳ್ಳಲು ಸಂಬAಧಪಟ್ಟ ಸಮಿತಿಗಳಿಗೆ ಸೂಚನೆ ನೀಡಲಾಗಿದೆ.
ಘಟಿಕೋತ್ಸವ ಸಂದರ್ಭದಲ್ಲಿ ಮೊಬೈಲ್ ಫೋನ್, ವಿಡಿಯೋ ಕ್ಯಾಮೆರಾ, ಸ್ಟಿಲ್ ಕ್ಯಾಮೆರಾಗಳನ್ನು ನಿಷೇಧಿಸಲಾಗಿದೆ. ಆಹ್ವಾನಿತರು ಬೆಳಿಗ್ಗೆ ೯-೦೦ ಗಂಟೆಯೊಳಗಾಗಿ ತಮ್ಮ ಆಸನಗಳಲ್ಲಿ ಕುಳಿತಿರಬೇಕು ಮತ್ತು ಆಹ್ವಾನಿತರು ಘಟಿಕೋತ್ಸವದ ಮಧ್ಯದಲ್ಲಿ ಸಭಾಭವನದಿಂದ ಹೊರಕ್ಕೆ ಹೋಗಬಾರದು.
ಘಟಿಕೋತ್ಸವ ಮೆರವಣಿಗೆ ಸಭಾಂಗಣದಲ್ಲಿ ಪ್ರವೇಶಿಸುವಾಗಿನಿಂದ ಹಿಡಿದು ಕುಲಾಧಿಪತಿಗಳು ಪೀಠಸ್ಥರಾಗುವವರೆಗೂ ಸಭಾಸದರು ಎದ್ದು ನಿಂತಿರಬೇಕು. ಹಾಗೆಯೇ ಘಟಿಕೋತ್ಸವ ಮುಗಿದ ಬಳಿಕ, ಮೆರವಣಿಗೆ ಸಭಾಂಗಣವನ್ನು ಬಿಟ್ಟು ತೆರಳುವವರೆಗೆ, ಸಭಾಸದರು ತಮ್ಮ ಸ್ಥಳಗಳಲ್ಲಿಯೇ ಎದ್ದು ನಿಂತಿರಬೇಕು.
ಘಟಿಕೋತ್ಸವದ ಸಭಾಂಗಣದಲ್ಲಿ ೧೨ ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶವಿಲ್ಲ. ಸಭಾಂಗಣದಲ್ಲಿ ಕ್ಯಾಮೆರಾ, ಮೊಬೈಲ್, ವಾಟರ್ ಬಾಟಲ್, ಕೊಡೆ, ಕೈಚೀಲ ಮುಂತಾದ ಯಾವುದೇ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವರಾದ ಆರ್. ಸುನಂದಮ್ಮ, ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಹಾಗೂ ಮಾಧ್ಯಮ ಸಮಿತಿ ಅಧ್ಯಕ್ಷರಾದ ಪ್ರೊ. ಓಂಕಾರ್ ಕಾಕಡೆ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ ಕೆ, ಆರ್ಥಿಕ ಅಧಿಕಾರಿ ಎಸ್.ಬಿ ಕಾಮಶೆಟ್ಟಿ, ಘಟಿಕೋತ್ಸವ ಸಂಯೋಜನಾಧಿಕಾರಿ ಪ್ರೊ.ಡಿ.ಎಮ್ ಮದರಿ ಉಪಸ್ಥಿತರಿದ್ದರು.


Leave a Reply