Belagavi

ಶಿಂದೋಳ್ಳಿಯಲ್ಲಿ ಅಪ್ಪುಗೆ ಭಾವಪೂರ್ಣ ಶ್ರದ್ಧಾಂಜಲಿ


ಬೆಳಗಾವಿ: ದೇವರ ಅನ್ನ ಫೌಂಡೇಶನ್ ವತಿಯಿಂದ ಅಗಲಿದ ನೆಚ್ಚಿನ ನಾಯಕ ನಟ, ಪುನೀತ್ ರಾಜಕುಮಾರ್ ಅವರಿಗೆ ಶಿಂದೋಳ್ಳಿ ಗ್ರಾಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ವೇಳೆ ಅಧ್ಯಕ್ಷ ಸುನೀಲ್ ಕೋಲಕಾರ್ ಅವರು ಮಾತನಾಡಿ ಪುನೀತ್ ರಾಜಕುಮಾರ್ ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು, ನೇತ್ರದಾನ ಮಾಡಿ ನಾವು ಕೂಡ ಅಂಧರಿಗೆ ಬೆಳಕಾಗಬೇಕು ಅಂತ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಫೌಂಡೇಶನ್ ಸರ್ವಸದಸ್ಯರು, ಗುರು ಹಿರಿಯರು, ಚಿಕ್ಕಮಕ್ಕಳು ಉಪಸ್ಥಿತರಿದ್ದರು.


Leave a Reply