Belagavi


ಅಥಣಿ: ತಾಲೂಕಿನ ಪಾರ್ಥನಹಳ್ಳಿ ಗ್ರಾಮದಲ್ಲಿ ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಮೈಸೂರ್ ಹುಲಿ ಟಿಪ್ಪು ಸುಸ್ತಾನ್ ರವರ 272ನೇ ಜಯಂತಿ ನೆರವೇರಿತು.

ನಂತರ ಮಾತನಾಡಿದ ಪ್ರಮುಖರಾದ ಜನಾಬ: ಮಮ್ಮದಶಿರಾಜ ದಸ್ಥಗೀರಸಾಬ್ ಮೊಳೆ, ಟಿಪ್ಪು ನಮ್ಮ ನಾಡಿಗೆ ಕೊಟ್ಟ ಕೊಡುಗೆ ಅಪಾರವಾದದ್ದು ಭಾರತ ಇತಿಹಾಸದಲ್ಲಿ ಟಿಪ್ಪುರವರ ಪಾತ್ರ ಬಹುಮುಖ್ಯವಾದದ್ದು ರಾಜ್ಯ ರಾಜಕೀಯದಲ್ಲಿ ತಮ್ಮ ತಮ್ಮ ಬೆಳೆ ಬೇಯಿಸಿಕೊಳ್ಳಲು ಟಿಪ್ಪು ಜಯಂತಿ ಆಚರಗೆ ಅಡ್ಡಿ ಮಾಡುತ್ತಿರುವುದು ತುಂಬಾ ಬೇಸರದ ಸಂಗತಿವೆಂದು ತಿಳಿಸಿದರು.

ಈದೆ ಸಂದರ್ಭದಲ್ಲಿ ಪಾರ್ಥನಹಳ್ಳಿ ಗ್ರಾಮದ ಮರಠಾ ಸಮಾಜದ ಮುಖಂಡರಾದ ಶ್ರೀ ರಾಜು ಚವಾಣ್ ಹಾಗೂ ಮುಸ್ಲಿಂ ಸಮಾಜದ ಯುವಕರುಗಳಾದ ಮೈನೋದ್ದಿನ್ ಬಿರಾದರ, ರಫೀಕ ಪಟೇಲ್, ಇಲಾಹಿ ಮೊಳೆ, ಆಶ್ರಫ್ಅಲಿ ಬಿರಾದಾರ್, ಗ್ರಾ. ಪಂ ಸದಸ್ಯರಾದ ಶರೀಫ ಮುಲ್ಲಾ ಗ್ರಾಮಸ್ಥರು ಹಿರಿಯರು ಇನ್ನಿತರು ಉಪಸ್ಥಿತರಿದ್ದರು.


Leave a Reply