Belagavi

ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸಪ್ತಸಾಗರಕ್ಕೆ ಭೇಟಿ; ಅಹವಾಲು ಸ್ವೀಕಾರ


ಅಥಣಿ : ಸಪ್ತಸಾಗರ ಗ್ರಾಮ ಪಂಚಾಯತಿಗೆ ಸರ್ಕಾರದ ಮುಖ್ಯಸಚೇತಕ ಹಾಗೂ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಭೇಟಿ ನೀಡಿ ಅಹವಾಲನ್ನು ಸ್ವೀಕರಿಸಿದರು.

ಸಪ್ತಸಾಗರ ಗ್ರಾಮ ವ್ಯಾಪ್ತಿಯ ಪ್ರಮುಖ ಸಮಸ್ಯೆಗಳಾದ ಬ್ರಿಡ್ಜ್, ಸಂತ್ರಸ್ಥರ ಶಾಶ್ವತ ಪರಿಹಾರ, ಪ್ಲೇವಿಂಗ್ ಬ್ಲಾಕ್‌,ಪರಿಹಾರ ವಿಳಂಬ, ದೇವಸ್ಥಾನಕ್ಕೆ ಅನುದಾನ ಬಿಡುಗಡೆ,ಸೇರಿದಂತೆ ಹಲವಾರು ಸಮಸ್ಯೆಗಳನ್ನು ಗ್ರಾಮದ ಮುಖಂಡ ಅಶೋಕ ಐಗಳಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ ಮನವರಿಕೆ ಮಾಡಿಕೊಟ್ಟರು.

ನಂತರ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ಕೊರೊನಾದಿಂದ ಬಹಳ ದಿನಗಳ ನಂತರ ಗ್ರಾಮಕ್ಕೆ ಭೇಟಿ ನೀಡುತ್ತಿದ್ದು ಗ್ರಾಮದಲ್ಲಿನ ವಿವಿಧ ಬೇಡಿಕೆಗಳನ್ನ ಈಡೇರಿಸಲು ಬಂದಿದ್ದೇನೆ ನನ್ನ ಕಾರ್ಯ ಯಾವತ್ತೂ ಜನರ ಮನಸ್ಸಿನಲ್ಲಿರುವಂತೆ ಮಾಡುವದಾಗಿದೆ ಈಗಾಗಲೇ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಹಲವಾರು ಜನಪರ ಕಾರ್ಯಗಳನ್ನ ಕೈಗೊಳ್ಳಲಾಗಿದೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನ ಮಾಡುವದಾಗಿ ಭರವಸೆ ನೀಡಲಾಗುವದು ಮತ್ತು ನಿಮ್ಮ ಗ್ರಾಮದ ಪ್ರಮುಖ ಬೇಡಿಕೆಯಾದ ಪ್ರವಾಹ ಸಂದರ್ಭದಲ್ಲಿ ಗ್ರಾಮದ ಜನರನ್ನು ಸ್ಥಳಾಂತರ ಮಾಡಲು ಅನೂಕೂಲವಾಗುವ ಸಪ್ತಸಾಗರದಿಂದ ವಿದ್ಯಾನಗರದವರೆಗೆ ಸೇತುವೆ ಕಾಮಗಾರಿಯನ್ನು ಶೀಘ್ರದಲ್ಲೇ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪೂರ್ಣಗೊಳಿಸುವ ಜವಾಬ್ದಾರಿ ನನ್ನದು ಜೊತೆಗೆ ಇನ್ನುಳಿದ ಸಮಸ್ಯೆಗಳನ್ನು ಕೂಡ ಬಗೆಹರಿಸಲಾಗುವದು ಎಂದರು

ನಂತರ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ,ಮಾಜಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರು ಸಪ್ತಸಾಗರ ಗ್ರಾಮಕ್ಕೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ ನೀಡಿದ್ದಾರೆ ಇಷ್ಟೇ ಅಲ್ಲ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಜೊತೆಗೂಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಲಾಗುವದು ಎಂದರು

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಿಬಸಪ್ಪಗೊಳ,ಅಥಣಿ ಭಾಜಪ ಮಂಡಳ ಅಧ್ಯಕ್ಷರಾದ ಅಣ್ಣಾಸಾಬ ನಾಯಕ,ಶ್ರೀಶೈಲ ನಾಯಕ,ಸುರೇಶ ಘೂಳಪ್ಪನವರ,ಅನೀಲ ಪವಾರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ ವಾಘಮೋರೆ,ಗ್ರಾಮ ಪಂಚಾಯತಿ ಅಧ್ಯಕ್ಷೆ ಹೀನಾ ಇಸ್ಮಾಯಿಲ್ ಕರಿಶಾಬು ಉಪಾಧ್ಯಕ್ಷೆ ದಾನಮ್ಮ ಚಿನ್ನಪ್ಪ ಕುಂಬಾರ,ಮುಖಂಡರಾದ ಅಶೋಕ ಐಗಳಿ,ಸಂಜಯ ನಾಡಗೌಡ,ಇಸ್ಮಾಯಿಲ್ ಕರಿಶಾಬು,ರಾವಸಾಬ ಐಗಳಿ ಮಹೇಂದ್ರ ಸುಲಾರೆ,ಯಲ್ಲಪ್ಪ ಕಾಂಬ್ಳೆ,ರಮೇಶ ಕಾಂಬ್ಳೆ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು


Leave a Reply