Belagavi

ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬೀರದೇವರ ಮೂರ್ತಿ ಪ್ರತಿಷ್ಟಾಪನೆ


ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದಲ್ಲಿ ಶ್ರೀ ಬೀರದೇವರ ಮೂರ್ತಿ ಪ್ರತಿಷ್ಟಾಪನೆ ಮತ್ತು ವಾಸ್ತುಶಾಂತಿ ಹಾಗೂ ಕಳಸಾರೋಹಣ ಸಮಾರಂಭ ಬುಧವಾರ ನಡೆಯಿತು.

ಸಮಾರಂಭದಲ್ಲಿ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಕಾಗಿನೆಲೆ, ಮುತ್ನಾಳ ಕೇದಾರಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಮಂಗಲವೇಡ ತಾಲೂಕಿನ ಸುಕ್ಷೇತ್ರ ಭೂ ಕೈಲಾಸದ ಶ್ರೀ ಮಾಳಿಂಗರಾಯ ಮಹಾರಾಜರು ಹುಲಜಂತಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಅರ್ಜುನ ಎಸ್ ಬೆಳಗುಂದ್ಕರ್, ಲಕ್ಷ್ಮಣರಾವ್ ಚಿಂಗಳೆ, ಸುನಿಲ್ ಮಲ್ಲಪ್ಪ ಅಷ್ಟೇಕರ್, ಧರ್ಮರಾಜ ಗೌಡರ, ಕಲ್ಲಪ್ಪ ಓಬಣ್ಣಗೋಳ, ಬಾಲಚಂದ್ರ ಪಾಟೀಲ, ಶ್ರೀಮತಿ ರುಕ್ಮಿಣಿ ಸಿಂಗಾರಿ, ಮಡ್ಡ್ಯಪ್ಪ ಟೋಳಣ್ಣವರ, ಎಚ್. ಎಸ್‌. ನಸಲಾಪುರಿ, ಆರ್. ಪಿ. ಪಾಟೀಲ, ಭಾಗಣ್ಣ ನರೋಟಿ, ಶ್ರೀ ಬೀರದೇವರ ಟ್ರಸ್ಟ್ ಕಮೀಟಿಯವರು, ಕನಕದಾಸ ಯುವಕ ಮಂಡಳ, ಗ್ರಾಮ ಪಂಚಾಯತಿಯ ಎಲ್ಲ ಪದಾಧಿಕಾರಿಗಳು, ಭೀಮರಾವ್ ಕೇದಾರ ಮುಂತಾದವರು ಉಪಸ್ಥಿತರಿದ್ದರು.


Leave a Reply