Belagavi

ಇಂದಿನಿಂದ ಬೆಳಗಾವಿಯಲ್ಲಿ ಪೊಲೀಸರು, ವೈದ್ಯರು, ಪತ್ರಕರ್ತರು, ವಿವಿಧ ಇಲಾಖೆ ಅಧಿಕಾರಿಗಳ ಕ್ರಿಕೆಟ್ ಪಂದ್ಯಾವಳಿ


ಬೆಳಗಾವಿ: ಅಪರಾಧ ತಡೆ ಮಾಸಾಚರಣೆ ಮತ್ತು ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಿಮಿತ್ಯ ಬೆಳಗಾವಿಯಲ್ಲಿ ಪೊಲೀಸರು, ವೈದ್ಯರು, ಪತ್ರಕರ್ತರು, ವಿವಿಧ ಇಲಾಖೆ ಅಧಿಕಾರಿಗಳಿಗೆ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿ ಇಂದಿನಿಂದ ಆರಂಭವಾಗಿದೆ.

ಶನಿವಾರ ಬೆಳಗಾವಿಯ ಪೊಲೀಸ್ ಮೈದಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್‍ಪಿ ಲಕ್ಷ್ಮಣ ನಿಂಬರಗಿ, ಡಿಎಆರ್ ಎಸ್‍ಪಿ ಕಾಶಪ್ಪನವರ, ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ ಸೇರಿದಂತೆ ಇನ್ನಿತರ ಗಣ್ಯರು 12 ತಂಡಗಳ ನಾಯಕರು, ಆಟಗಾರರು ಉಪಸ್ಥಿತರಿದ್ದರು.

ಇದೇ ವೇಳೆ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರು ಟೊರ್ನಾಮೆಂಟ್‍ನ ನಿಯಮಗಳನ್ನು ಆಟಗಾರರಿಗೆ ತಿಳಿಸಿದರು.

ಟೊರ್ನಾಮೆಂಟ್‍ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು, ಆರು ತಂಡಗಳಂತೆ ಗ್ರುಪ್ ಎ ಮತ್ತು ಗ್ರುಪ್ ಬಿ ಎಂದು ಎರಡು ವಿಭಾಗಗಳನ್ನು ಮಾಡಲಾಗಿದೆ. ಮೊದಲ ಪಂದ್ಯ ಎ ಗುಂಪಿನ ಕೆಎಸ್‍ಆರ್‍ಪಿ ಪೊಲೀಸರು ಹಾಗೂ ವೈದ್ಯರ ತಂಡಗಳ ನಡುವೆ ನಡೆಯಿತು. ಎರಡನೇ ಪಂದ್ಯ ಚಿಕ್ಕೋಡಿ ಮಿಡಿಯಾ ಮತ್ತು ಕಮಿಶನರ್ ಕಾರ್ಪೊರೇಶನ್ ತಂಡಗಳ ನಡುವೆ ನಡೆಯಲಿದೆ. ಅದೇ ರೀತಿ ಮೂರನೇ ಪಂದ್ಯ ಬಿಆರ್‍ಡಿಎಸ್ ಮತ್ತು ಅಡ್ವೊಕೇಟ್ಸ್ ತಂಡಗಳು ನಡುವೆ ನಡೆಯಲಿದೆ.

ಇನ್ನು ಗ್ರುಪ್ ಬಿ ವಿಭಾಗದಲ್ಲಿ ಮೊದಲ ಪಂದ್ಯ ಎಸ್‍ಪಿ-11 ಮತ್ತು ಇಲೆಕ್ಟ್ರಾನಿಕ್ ಮಿಡಿಯಾ, ಎರಡನೇ ಪಂದ್ಯ ಡಿಸಿ-11 ಮತ್ತು ಸಿಪಿ-11, ಮೂರನೇ ಪಂದ್ಯ ಪ್ರಿಂಟ್ ಮಿಡಿಯಾ ಮತ್ತು ಪೊಲೀಸ್-11 ತಂಡದ ನಡುವೆ ನಡೆಯಲಿದ್ದು. ಇವುಗಳಲ್ಲಿ ಗೆದ್ದ ತಂಡಗಳ ನಡುವೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ರವಿವಾರ ನಡೆಯಲಿವೆ.


Leave a Reply