Belagavi

ಬದುಕಿನಲ್ಲಿ ತಂದೆ ತಾಯಿಗಳ ಗುರುವಿನ ಸ್ಥಾನಕ್ಕೆ ಮಹತ್ವದ ಸ್ಥಾನ : ಮುಕ್ತಿ ಮಠದ ಶ್ರೀ ಗಳು


ಬೆಳಗಾವಿ: ಬದುಕಿನಲ್ಲಿ ಉತ್ತಮ ನಡೆನುಡಿ, ಸದಾಚಾರ, ಹೊಂದಿ ಇತರರಿಗೆ ನೆರವಾಗುವ ಮೂಲಕ ಉನ್ನತ ಮೌಲ್ಯಯುತ ಜೀವನ ಸಾಗಿಸಬೇಕು, ಬದುಕಿನಲ್ಲಿ ತಂದೆ ತಾಯಿಗಳ ಗುರುವಿನ ಸ್ಥಾನಕ್ಕೆ ಮಹತ್ವದ ಸ್ಥಾನವಿದೆ ಎಂದು ಮುಕ್ತಿಮಠದ ಪೂಜ್ಯ ರತ್ನ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಅಭಿಪ್ರಾಯ ಪಟ್ಟರು

ಅವರಿಂದು ನಗರದ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ರಡ್ಡಿಭವನದ ಸಭಾಂಗಣದಲ್ಲಿ ಜರುಗಿದ ವಿಶ್ವ ಶೈಕ್ಷಣಿಕ ದಿನಾಚರಣೆ ನಿಮಿತ್ತ ಸಾಧಕರಿಗೆ ಸದ್ಗುರು ಕಾಯಕ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ನಾಡಿನ ಸಮಾಚಾರ
ದಿನಪತ್ರಿಕೆಯ ಸಂಚಿಕೆ ಲೋಕಾಪ9ಣೆ,ಕೈ, ಫಕೀರಪ್ಪ ಸುಣಗಾರ ರವರ ಸ್ಮರಣೆ ಕಾಯ9ಕ್ರಮ ದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಸಮಾಜದಲ್ಲಿ ಶ್ಲಾಘನೀಯ ಕಾಯ9ಮಾಡುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಅನುಕರಣೀಯ ಎಂದರು, ಕಳೆದ ಹಲವಾರು ವರ್ಷಗಳಿಂದ ಸಾಹಿತಿ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ ರವರು ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಮೂಲಕ ಹಲವಾರು ಸಾಧಕರಿಗೆ ಸನ್ಮಾನಿಸುವುದು. ವಿವಿಧ ಬಗೆಯ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರೇಮುನವಳ್ಳಿಯ ಸಿದ್ಧ ಶಿವಯೋಗಿ ಶಾಂಡಿಲೇಶ್ವರ ಪುಣ್ಯ ಕ್ಷೇತ್ರಹಿರೇಮಠದ ಶ್ರೀ ಶಂಭುಲಿಂಗ ಶಿವಾಚಾರ್ಯಮಹಾಸ್ವಾಮಿಗಳವರು
ಕಾಯ9ಕ್ರಮದ ಸಾನಿಧ್ಯವಹಿಸಿದ್ದರು
ಸಾಹಿತಿ ಸಂಘಟಕರಾದ ಬಸವರಾಜ ಗಾಗಿ9ಯವರು ಅಧ್ಯಕ್ಷತೆ ವಹಿಸಿದ್ದರು, ನಿವೃತ್ತ ಪ್ರಾಚಾರ್ಯ ಬಿ ಎಸ್ ಗವಿಮಠ ಯವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಅರ್ಹ ವ್ಯಕ್ತಿ ಗಳನ್ನು ಪ್ರಶಸ್ತಿಗಳಿಗೆ ಗುರುತಿಸಬೇಕು,ನಿರಂತರ ಕ್ರಿಯಾಶೀಲತೆ ವುಳ್ಳ ಪ್ರಶಸ್ತಿ ಪಡೆದವರು ಹೆಚ್ಚಿನ ಕಾರ್ಯಗಳನ್ನು ಮಾಡುವ ಕೌಶಲ್ಯ ಬೆಳೆಸಿಕೊಳ್ಳಬೇಕು, ತನ್ನ ಸ್ವಂತ ಸಂಪನ್ಮೂಲ ಗಳಿಂದ ಕಾಯ9ಕ್ರಮ ಮಾಡುವ ಸಂಘ ಸಂಸ್ಥೆಗಳಿಗೆ ಸರಕಾರ ಸಹಾಯ ಧನ ಎಂದು ನಗರದ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಕೆಲಸ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆ ಬಿ ತಾಳೂಕರ, ರವಿ ಎನ್ ಶಾಸ್ತ್ರಿ, ಮಂಜುಳಾ ಸುಣಗಾರ, ರಾಜೇಂದ್ರ ಕುಮಾರ ಚಲವಾದಿ, ಎಸ್ ಎಸ್ ಪಾಟೀಲ ಸೇರಿದಂತೆ ತಾಲೂಕಿನ ಶಿಕ್ಷಕರು ಉಪಸ್ಥಿತರಿದ್ದರು.
ಸಾಹಿತಿ ಸಂಘಟಕರಾದ ಮಹಾದೇವ ಬಿರಾದಾರ ಅಪ್ಪನ ಸ್ಮರಣೆ ಕುರಿತು ಮಾತನಾಡಿದರು ಬದುಕಿನಲ್ಲಿ ತಂದೆ ತಾಯಿಗಳ ಮಹತ್ವ ವಿವರಿಸಿದರು,

ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಬಸವರಾಜ ಫಕೀರಪ್ಪ ಸುಣಗಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದು ದಾರಿ ವಿವರಿಸಿದರು, ಪ್ರಕಾಶ್ ಇಚಲಕರಂಜಿ ಯವರು ವಾದಿಸಿದರು, ಪ್ರಾಚಾರ್ಯ ಗಂಗಾಧರ ಮರಳಹಳ್ಳಿಯವರು ಕಾಯ9ಕ್ರಮ ನಿವ9ಹಿಸಿದರು,


Leave a Reply