Belagavi

ಚಿಪ್ಪಲಕಟ್ಟಿ ಮಹಾಲಕ್ಷ್ಮಿ ದೇವಸ್ಥಾನದ ಆನೆ ಸಾವು


ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಹೆಣ್ಣು ಆನೆ ಸಾವನ್ನಪ್ಪಿದೆ.

ಆನೆಯ ಹಿಂದಿನ ಬಲಗಾಲಿಗೆ ಗಾಯವಾಗಿದ್ದು, ಒಂದು ತಿಂಗಳದಿಂದಲೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ಜಾವ ಅನಾರೋಗ್ಯದಿಂದ ಸುಧಾ ಎಂಬ ಹೆಣ್ಣು ಆನೆ (60) ಸಾವನ್ನಪ್ಪಿದೆ.

1975ರಲ್ಲಿ ಚಿಪ್ಪಲಕಟ್ಟಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಆಗಮಿಸಿದ ಸುಧಾ, ವಿವಿಧ ರಾಜ್ಯಗಳ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿತ್ತು. ಆನೆ ಸಾವಿನಿಂದ ಚಿಪ್ಪಲಕಟ್ಟಿ ಗ್ರಾಮದಲ್ಲಿ ನೀರವ ಮೌನ ಮನೆಮಾಡಿದೆ.


Leave a Reply