Belagavi

ಪ್ರವಚನ ಮಾಡುತ್ತಲೇ ಜೀವ ಬಿಟ್ಟ ಸ್ವಾಮೀಜಿ :  ಭಕ್ತನ ಮೊಬೈಲ್ ನಲ್ಲಿ ದೃಶ್ಯ ಸೆರೆ 


ಬೆಳಗಾವಿ: ಪ್ರವಚನ ಮಾಡುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೊಳಗಾದ ಸ್ವಾಮೀಜಿಯೊಬ್ಬರು ಜನ್ಮದಿನದಂದೇ ಶಿವನ ಪಾದ ಸೇರಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್​ ತಾಲೂಕಿನ ಬಳೋಬಾಳ್​ ಗ್ರಾಮದಲ್ಲಿ ನಡೆದಿದೆ.

 

ನವೆಂಬರ್​ 6ರಂದು ಘಟನೆ ನಡೆದಿದ್ದು, ‌ತಡವಾಗಿ ಬೆಳಕಿಗೆ ಬಂದಿದೆ.  ಬಳೋಬಾಳ್ ಮಠದ ಸಂಗನಬಸವ ಮಹಾಸ್ವಾಮೀಜಿ (53) ಅವರ ಜನ್ಮದಿನದ ನಿಮಿತ್ತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕುರ್ಚಿ ಮೇಲೆ ಕುಳಿತು ಆಶೀರ್ವಚನ ನೀಡುತ್ತಿದ್ದ ವೇಳೆ ಸಂಗನಬಸವ ಮಹಾಸ್ವಾಮೀಜಿ ಅವರು ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. ಬಿದ್ದ ಕ್ಷಣವೇ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿ ಬೀಳುವ ದೃಶ್ಯ ಭಕ್ತರ ಮೊಬೈಲ್​​​​​ನಲ್ಲಿ ಸೆರೆಯಾಗಿದೆ.


Leave a Reply